ಕಾಸರಗೋಡು : ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೆ. 23ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10ಕ್ಕೆ ಕುಂಡಂಗುಳಿ ಫಾರ್ಮರ್ಸ್ ಬ್ಯಾಂಕ್ ಕಟ್ಟಡ ಉದ್ಘಾಟನೆ, 11.30ಕ್ಕೆ ಪೆರಿಯಾಟಡ್ಕ, ಮಧ್ಯಾಹ್ನ 3.30ಕ್ಕೆ ವೆಲ್ಲಿಕೋತ್, ಸಂಜೆ 5.30 ಕಾಲಿಕಡವಿನಲ್ಲಿ ಸಾರ್ವಜನಿಕ ಸಮಾರಂಭ, ಸಂಜೆ 4.30ಕ್ಕೆ ಮಡಿಕೈ ಕಾಞರಪೊಯಿಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಕಟ್ಟಡ ಉದ್ಘಾಟನೆ ನಡೆಸುವರು.