ತಿರುವನಂತಪುರಂ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಗೆ ಮಾಹಿತಿ ಸೋರಿಕೆ ಮಾಡಿದ್ದ ಸಬ್ ಇನ್ಸ್ ಪೆಕ್ಟರ್ ರನ್ನು ಅಮಾನತು ಮಾಡಲಾಗಿದೆ.
ಸೈಬರ್ ಸೆಲ್ ಎಸ್‍ಐ ರಿಜುಮೋನ್ ಅವರನ್ನು ಅಮಾನತುಗೊಳಿಸಲಾಗಿದೆ. ಈತ ನಿಷೇಧಿತ ಸಂಘಟನೆಗಳಿಗೆ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದನ್ನು ಎನ್‍ಐಎ ಪತ್ತೆ ಹಚ್ಚಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ರಿಜುಮೋನ್ ಕೊಟ್ಟಾಯಂ ಈಸ್ಟ್ ಪೋಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಎನ್‍ಐಎ ಜಿಲ್ಲೆಯ ಪೂರ್ವ ಭಾಗದಲ್ಲಿ ನಿಷೇಧಿತ ಸಂಘಟನೆಗಳಲ್ಲಿ ಭಾಗಿಯಾಗಿರುವ ಜನರನ್ನು ಪತ್ತೆಹಚ್ಚಿ ಈ ಮಾಹಿತಿಯನ್ನು ಪಿಎಫ್‍ಐ ಮುಖಂಡರೊಂದಿಗೆ ಹಂಚಿಕೊಂಡಿರುವ ಪುರಾವೆಗಳಿವೆ. ಕೆಲ ಕಾಲ ಎನ್‍ಐಎ ನಿಗಾದಲ್ಲಿದ್ದ. ನಂತರ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಲಾಯಿತು.
ತೊಡುಪುಳ ಕರಿಮನೂರು ಠಾಣೆಯಿಂದ ಆರ್ ಎಸ್ ಎಸ್ ಕಾರ್ಯಕರ್ತರ ಮಾಹಿತಿಯನ್ನು ಪಾಪ್ಯುಲರ್ ಫ್ರಂಟ್ ನಾಯಕರಿಗೆ ಸೋರಿಕೆ ಮಾಡಿದ್ದಕ್ಕಾಗಿ ಸಿವಿಲ್ ಪೋಲೀಸ್ ಅಧಿಕಾರಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ ತಿಂಗಳೊಳಗೆ ಅಧಿಕಾರಿ ಸಿಲುಕಿಕೊಂಡರು.