ಕಾಸರಗೋಡು: ಅಸ್ಸಾಂ ರಾಜ್ಯದ ಗೌಹಾಟಿಯಲ್ಲಿರುವ ಕಾಮಾಖ್ಯ ದೇವಸ್ಥಾನದ ಸನ್ನಿಧಾನದಲ್ಲಿ ಬ್ರಹ್ಮಪುತ್ರಾ ನದಿ ತೀರದಲ್ಲಿ ಐದು ವರ್ಷದಲ್ಲಿ ಒಂದು ಬಾರಿ ನಡೆಯುವ ಅತಿರುದ್ರ ಮಹಾಯಾಗದಲ್ಲಿ ಎರಡನೇ ಬಾರಿಗೆ ಬೇಕಲ ಗೋಶಾಲೆಯ ಪರಂಪರಾ ವಿದ್ಯಾಪೀಠದ ಆಚಾರ್ಯರಾದ ವಿಷ್ಣು ಪ್ರಸಾದ್ ಹೆಬ್ಬಾರ್ ಅವರ ತಂಡವು ನೇತೃತ್ವ ವಹಿಸಲಿದೆ.
ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿರುವ ಭಾರತದ ವಿವಿಧ ಪ್ರದೇಶಗಳಿಂದ ಮುನ್ನೂರರಷ್ಟು ಮಂದಿ ವೇದಪಂಡಿತರು 6 ದಿನಗಳ ಕಾಲ ನಡೆಯುುವ ಯಾಗದಲ್ಲಿ ಭಾಗವಹಿಸುತ್ತಾರೆ.
ಸೆ. 22 ರಿಂದ 27 ರವರೆಗೆ ನಡೆಯುತ್ತಿರುವ ಯಾಗದಲ್ಲಿ ಕಾಂಞಂಗಾಡ್ ಪುಲ್ಲೂರು ಯೋಗ ಸಭೆಯ ವಿನೀತ್ ಪಟ್ಟೇರಿ, ವಾರಿಕಟ್ಟಿಲತ್ತು ಶ್ರೀಧರನ್, ಪ್ರಸಿದ್ಧ ದೇವನರ್ತಕ ಶಿವಪ್ರಸಾದ್ ಮಣೋಳಿತ್ತಾಯ , ಕುನ್ನತ್ತಿಲತ್ತ್ ರಾಧಾಕಣ್ಣನ್ ನಂಬೂದಿರಿ, ವಯನಾಡ್ ಪುದುಮನ ಹರಿ ನಂಬೂದಿರಿ ಮುಂತಾದವರು ಹಾಗೂ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ನರಸಿಂಹ ಅಡಿಗ, ಸುಬ್ರಹ್ಮಣ್ಯ ಅಡಿಗ, ಚಂದ್ರಶೇಖರ ಅಡಿಗ ಮುಂತಾದವರು ಭಾಗವಹಿಸಲಿದ್ದಾರೆ.
ಚೆರುತಾಯಂ ವಿಪಿನ್ ಮಾರಾರ್ ಇವರ ನೇತೃತ್ವದಲ್ಲಿ ಪಂಚವಾದ್ಯ ತಂಡ, , ಪಯ್ಯನ್ನೂರು ಗೋವಿಂದಪ್ರಸಾದ್ ಅವರ ನೇತೃತ್ವದಲ್ಲಿ ಇಪ್ಪತೈದು ಮಂದಿ ಕರ್ನಾಟಕ ಸಂಗೀತಜ್ಞರು ಭಾಗವಹಿಸುತ್ತಾರೆ.
ಭಾರತದ ವಿವಿಧ ಸ್ಥಳಗಳಿಂದ ಬರುವ ಭಕ್ತರಿಗೆ ಇರುವ ಸೌಲಭ್ಯಗಳನ್ನು ಅಸ್ಸಾಂ ಸರ್ಕಾರ ಒದಗಿಸುತ್ತದೆ.