ನವದೆಹಲಿ: ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ನಿವಾರಿಸುವ ಸಲುವಾಗಿ ಶ್ರೀಮಂತ ರಾಷ್ಟ್ರಗಳು ತಮ್ಮ ವಾಗ್ದಾನದಂತೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹಣ ಒದಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಪಾದಿಸಿದ್ದಾರೆ.

ಜಿ-20 ಶೃಂಗಸಭೆ ಅಂಗವಾಗಿ ಮೋದಿ ಅವರು ಬರೆದಿರುವ ಲೇಖನದಲ್ಲಿ ಹವಾಮಾನ ಬದಲಾವಣೆ ಒಡ್ಡಿರುವ ಸವಾಲುಗಳು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಹವಾಮಾನ ಬದಲಾವಣೆಗೆ ಸಂಬಂಧಿಸಿ 2015ರ 'ಪ್ಯಾರಿಸ್ ಒಪ್ಪಂದ' ದಂತೆ ವರ್ಷಕ್ಕೆ ₹ 8 ಲಕ್ಷ ಕೋಟಿ ನೀಡುವಲ್ಲಿ ಶ್ರೀಮಂತ ರಾಷ್ಟ್ರಗಳು ವಿಫಲ ವಾಗಿವೆ ಎಂದೂ ಮೋದಿ ಹೇಳಿದ್ದಾರೆ.
ಇನ್ನೆರಡು ತಿಂಗಳಲ್ಲಿ, ಯುಎಇಯಲ್ಲಿ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ನಡೆಯಲಿದೆ. ಹೀಗಾಗಿ, ಮೋದಿ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.
ಹವಾಮಾನ ಬದಲಾವಣೆಯಿಂದಾಗುವ ಅಪಾಯಕಾರಿ ಪರಿಣಾಮಗಳನ್ನು ತಡೆಯಲೇಬೇಕಾದಲ್ಲಿ, ವಿಶ್ವದ 20 ಅಗ್ರ ರಾಷ್ಟ್ರಗಳು ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಗೆ ಮುಂದಾಗಬೇಕು ಎಂದೂ ಪ್ರತಿಪಾದಿಸಿದ್ದಾರೆ.
'ಜನವರಿಯಲ್ಲಿ ವರ್ಚುವಲ್ ಆಗಿ ಆಯೋಜಿಸಲಾಗಿದ್ದ 'ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮಿಟ್'ನಲ್ಲಿ 125 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಭಿವೃದ್ಧಿ ಹೊಂದುತ್ತಿ ರುವ ಹಾಗೂ ಬಡ ರಾಷ್ಟ್ರಗಳಿಗೆ ಈ ಸಮಾವೇಶ ಧ್ವನಿಯಾಗಿತ್ತು' ಎಂದು ಹೇಳಿದ್ದಾರೆ.