ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನನ್ನು ರಕ್ಷಿಸಿದ ಭಾರತೀಯ ಸೇನೆಯ ಶ್ವಾನ 'ಕೆಂಟ್' ಮಂಗಳವಾರ ಸಾವಿಗೀಡಾಗಿದೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನನ್ನು ರಕ್ಷಿಸಿದ ಭಾರತೀಯ ಸೇನೆಯ ಶ್ವಾನ 'ಕೆಂಟ್' ಮಂಗಳವಾರ ಸಾವಿಗೀಡಾಗಿದೆ.
ಆರು ವರ್ಷದ ಹೆಣ್ಣು ಶ್ವಾನ 'ಕೆಂಟ್' ಒಂಬತ್ತು ಸೇನಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿತ್ತು. ಲ್ಯಾಬ್ರಡಾರ್ ತಳಿಗೆ ಸೇರಿದ 'ಕೆಂಟ್' ಸೇನೆಯ 21ನೇ ಶ್ವಾನದಳದಲ್ಲಿತ್ತು.
'ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ 'ಕೆಂಟ್' ಯೋಧರ ಪಡೆಯನ್ನು ಮುನ್ನಡೆಸುತ್ತಿತ್ತು. ಕಾರ್ಯಾಚರಣೆಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 'ಕೆಂಟ್' ನಮ್ಮ ಯೋಧನನ್ನು ರಕ್ಷಿಸಿ ತನ್ನ ಜೀವವನ್ನು ಅರ್ಪಿಸಿದೆ' ಎಂದು ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ (ಉತ್ತರ) ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ರಜೌರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಹಾಗೂ ಒಬ್ಬ ಯೋಧ ಸಾವಿಗೀಡಾಗಿದ್ದು, ಇತರ ಮೂವರು ರಕ್ಷಣಾ ಸಿಬ್ಬಂದಿ ಹಾಗೂ ಸೇನೆಯ ಇಬ್ಬರು ಯೋಧರು, ಒಬ್ಬ ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. 'ಆಪರೇಷನ್ ಸುಜಲಿಗಾಲಾ'ದ ನೇತೃತ್ವವನ್ನು 'ಕೆಂಟ್' ವಹಿಸಿತ್ತು.
ಸೇನಾ ಗೌರವ: ವೀರಮರಣವನ್ನಪ್ಪಿದ 'ಕೆಂಟ್'ನ ದೇಹವನ್ನು ಬುಧವಾರ ತ್ರಿವರ್ಣ ಧ್ವಜಗಳಿಂದ ಸುತ್ತಿ ಸೇನಾಸಿಬ್ಬಂದಿ ಶ್ರದ್ಧಾಂಜಲಿ ಅರ್ಪಿಸಿದರು.