ಕಾಸರಗೋಡು: ಪಡನ್ನಕ್ಕಾಡ್ ಮತ್ತು ಆವಿಕ್ಕರಕ್ಕೆ ಮಂಜೂರುಗೊಳಿಸಲಾದ ನಗರ ಆರೋಗ್ಯ ಸ್ವಾಸ್ಥ್ಯ ಕೇಂದ್ರಗಳ ಉದ್ಘಾಟನಾ ಸಮಾರಂಭ ನಡೆಯಿತು. ಆವಿಕ್ಕರ ಕೇಂದ್ರವನ್ನು ಶಾಸಕ ಇ.ಚಂದ್ರಶೇಖರನ್ ಹಾಗೂ ಪಟನ್ನಕ್ಕಾಡ್ ನಗರ ಆರೋಗ್ಯ ಸ್ವಾಸ್ಥ್ಯ ಕೇಂದ್ರವನ್ನು ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು.
ವಿವಿಧ ರೋಗನಿರೋಧಕ ಲಸಿಕೆಗಳು, ಗರ್ಭಿಣಿಯರ ಆರೋಗ್ಯ ರಕ್ಷಣೆ, ಜೀವನಶೈಲಿ ರೋಗನಿರ್ಣಯ, ಹದಿಹರೆಯದವರ ಆರೈಕೆ, ಪ್ರಥಮ ಚಿಕಿತ್ಸೆ, ಇತರ ಆಸ್ಪತ್ರೆಗಳಿಗೆ ಶಿಫಾರಸು, ಔಷಧಿಗಳ ವಿತರಣೆ ಮತ್ತು ನಿಗದಿತ ದಿನಗಳಲ್ಲಿ ವೈದ್ಯರ ಸೇವೆ ಈ ಕೇಂದ್ರಗಳಿಂದ ಲಭ್ಯವಘಲಿದೆ. ಹಣಕಾಸು ಆಯೋಗದ ಅನುದಾನದೊಂದಿಗೆ ರಾಷ್ಟ್ರೀಯ ಆರೋಗ್ಯ ಮಿಷನ್‍ಸಹಯೋಗದ ಮೂಲಕ ನಗರ ಆರೋಗ್ಯ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೈದ್ಯಕೀಯ ಅಧಿಕಾರಿ, ಸ್ಟಾಫ್ ನರ್ಸ್ ಮತ್ತು ಫಾರ್ಮಾಸಿಸ್ಟ್‍ಗಳ ಸೇವೆಯೂ ಇಲ್ಲಿ ಲಭ್ಯವಿದೆ.
ಕಾಞಂಗಾಡು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ವಿ.ಸರಸ್ವತಿ, ಪಿ.ಅಹಮದಾಲಿ, ಕೆ.ಅನೀಸನ್, ಕೆ.ಪ್ರಭಾವತಿ, ಕೌನ್ಸಿಲರ್‍ಗಳಾದ ಎ.ಕೆ.ಲಕ್ಷ್ಮಿ, ಕೆ.ಕೆ.ಜಾಫರ್, ಅನಿಸಾ, ಎಚ್.ಶಿವದತ್ತ್, ನಜ್ಮಾ ರಫಿ, ಕೆ.ವಿ.ಮಾಯಾಕುಮಾರಿ, ಹಸೀನಾ ರಝಾಕ್, ಎಂ.ಕೆ. ರವೀಂದ್ರನ್ ಉಪಸ್ಥಿತರಿದ್ದರು. ಅಲೆಕ್ಸ್ ಜೋಸ್ ಸ್ವಾಗತಿಸಿದರು. ಕಾಞಂಗಾಡು ನಗರಸಭಾ ಕಾರ್ಯದರ್ಶಿ ಶೈನ್ ಪಿ ಜೋಸ್ ವಂದಿಸಿದರು.