ಕಾಸರಗೋಡು: ಮುಳಿಯಾರ್ ಕೃಷಿ ಭವನದಲ್ಲಿ ರೈತರಿಗೆ ವಿತರಿಸಲು ಪಡನ್ನಕ್ಕಾಡ್ ಕೃಷಿ ಕಾಲೇಜು, ಪಿಲಿಕ್ಕೋಡ್ ಕೃಷಿ ಸಂಶೋಧನಾ ಕೇಂದ್ರದಿಂದ ಉತ್ಪಾದಿಸಿದ ಅತ್ಯುತ್ತಮ ಹೈಬ್ರಿಡ್ (ಕೆರಶ್ರೀ) (ಡಬ್ಲ್ಯು.ಸಿ.ಟಿ) ಸ್ಥಳೀಯ ತೆಂಗಿನ ಸಸಿಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ.
ಹೈಬ್ರಿಡ್ ತೆಂಗಿನ ಪ್ರಯಿ ಸಸಿಯನ್ನು 125 ರೂಪಾಯಿ ದರದಲ್ಲಿಯೂ, ಸ್ಥಳೀಯ ಡಬ್ಲ್ಯು.ಸಿ.ಟಿ ತೆಂಗಿನ ಸಸಿಯನ್ನು 50 ರೂಪಾಯಿ ದರದಲ್ಲಿಯೂ ಮಾರಾಟ ಮಾಡಲಾಗುವುದು. ಆಸಕ್ತ ರೈತರು 2023ರ ತೆರಿಗೆ ಪಾವತಿಸಿದ ರಸೀದಿಯೊಂದಿಗೆ ಕೃಷಿಭವನ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.