ಉಪ್ಪಳ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಉಪ್ಪಳ ಘಟಕದ ಮಹಾಸಭೆ ಮಂಗಳವಾರ ಉಪ್ಪಳ ವ್ಯಾಪಾರಿ ಭವನದಲ್ಲಿ ಜರಗಿತು. ಉಪ್ಪಳ ಘಟಕ ಅಧ್ಯಕ್ಷ ಮಿಥುನ್ ಜೆ. ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ಕುಂಬಳೆ ವಲಯ ಸಮಿತಿ ಅಧ್ಯಕ್ಷ ಸುರೇಶ್ ಆಚಾರ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಕೆಪಿಎ ರಾಜ್ಯ ವನಿತಾ ವಿಭಾಗದ ಸಂಯೋಜಕ ಹರೀಶ್ ಪಾಲಕುನ್ನು, ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ, ಜಿಲ್ಲಾ ಉಪಾಧ್ಯಕ್ಷ ವಿಜಯನ್ ಶೃಂಗಾರ್, ಜಿಲ್ಲಾ ಕೋಶಾಧಿಕಾರಿ ವೇಣು ವಿ.ವಿ., ಕುಂಬಳೆ ವಲಯ ಉಸ್ತುವಾರಿ ಸುಧೀರ್, ವಲಯ ಸಮಿತಿ ಕಾರ್ಯದರ್ಶಿ ನಿತ್ಯಪ್ರಸಾದ್, ಕೋಶಾಧಿಕಾರಿ ವೇಣುಗೋಪಾಲ ಬದಿಯಡ್ಕ, ಎಕೆಪಿಎ ಉಪ್ಪಳ ಘಟಕ ಸಮಿತಿ ಉಸ್ತುವಾರಿ ರಾಮಚಂದ್ರ ಪಾಲ್ಗೊಂಡಿದ್ದರು. ಉಪ್ಪಳ ಘಟಕ ಕಾರ್ಯದರ್ಶಿ ಸಂದೇಶ್ ಐಲ ಸ್ವಾಗತಿಸಿ, ಕೋಶಾಧಿಕಾರಿ ರಾಜೇಶ್ ವಂದಿಸಿದರು. ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.