ಮುಳ್ಳೇರಿಯ: ಹಿಂದುಸ್ತಾನ್ ವಾಟ್ಸಪ್ ಗ್ರೂಪ್ ಇದರ ಎಂಟನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಗುಂಪಿನ ಸದಸ್ಯರ ಸಹಭಾಗಿತ್ವದಲ್ಲಿ ಅರೋಗ್ಯ ಕ್ಷೇತ್ರದಲ್ಲಿ 27 ವರ್ಷ ಸೇವೆಸಲ್ಲಿಸುತ್ತಿರುವ ಬೇಬಿ. ಪಿ ಮುಳ್ಳೇರಿಯಾ ಇವರನ್ನು ಶಾಲು ಹೊದೆಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿಲಾಯಿತು.
ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಕಾರಡ್ಕ ಪಂಚಾಯತಿ ಸದಸ್ಯ ಸಿ. ಎನ್. ಸಂತೋಷ್, ಧಾರ್ಮಿಕ ಮುಂದಾಳು ಎ. ಬಿ.ಗಂಗಾಧರ ಬಲ್ಲಾಳ್, ಶಿವರಾಮ ಆಳ್ವ, ಸುಧೀರ್ ಕುಮಾರ್ ರೈ, ಕುಮಾರನ್, ಪ್ರಕಾಶ್ ರೈ, ಗುಂಪಿನ ನಿರ್ವಾಹಕ(ಅಡ್ಮಿನ್) ವೆಂಕಟೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.