ಕಣ್ಣೂರು: ಸಹಕಾರಿ ಬ್ಯಾಂಕ್ ಕಚೇರಿ ಉದ್ಘಾಟನೆಗೆ ಬಂದಿದ್ದ ಸ್ಪೀಕರ್ ಎದುರು ಯುವಕನೊಬ್ಬ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾನೆ. ಕಿಳಿಯಂತರ ಸೇವಾ ಸಹಕಾರಿ ಬ್ಯಾಂಕ್ ಅನ್ಪಂತಿಕಾವಲ ಬೆಳಗ್ಗೆ-ಸಂಜೆ ಶಾಖೆಯ(ಸಾಯಾನ್ನ) ನೂತನ ಕಚೇರಿ ಉದ್ಘಾಟನೆ ಹಾಗೂ ಕಿಳಿಯಂತರ-ನಿರಂಗನ ಚಿಟ್ಟಾದಲ್ಲಿ ಆರಂಭಿಸಲಿರುವ ರಬ್ಬರ್ ಹಾಲು ಶೇಖರಣಾ ದರ್ಜೆಯ ಶೀಟ್ ತಯಾರಿಕಾ ಘಟಕದ ಶಂಕುಸ್ಥಾಪನೆ ನೆರವೇರಿಸಲು ಸ್ಪೀಕರ್ ಎ.ಎನ್.ಶಂಸೀರ್ ಆಗಮಿಸಿದ್ದರು.
ಸಭಾಧ್ಯಕ್ಷರು ದೀಪ ಬೆಳಗಿಸುವಾಗ ಗಣೇಶ ದೇವರು ಪುರಾಣ ಕಲ್ಪನೆ(ಮಿಥ್) ಅಲ್ಲ ಎಂದು ಹೇಳುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಘಟನೆ ಬಳಿಕ ಪೋಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಈತ ಗಣಪತಿ ಮಿಥ್ ಅಲ್ಲ ಎಂದು ಕೂಗಾಡಿದ್ದಕ್ಕೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಗಣೇಶನನ್ನು ಅವಮಾನಿಸುವ ಹೇಳಿಕೆ ಖಂಡಿಸಿ ಯುವಕ ಪ್ರತಿಭಟನೆ ನಡೆಸಿದ್ದಾನೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಇವು ಕೇವಲ ಪುರಾಣಗಳಾಗಿವೆ ಎಂದು ಸ್ಪೀಕರ್ ಇತ್ತೀಚೆಗೆ ಹೇಳಿಕೆ ನ|ಈಡಿ ವಿವಾದಕ್ಕೀಡಾಗಿದ್ದರು. ಹಿಂದೂ ಪುರಾಣಗಳಲ್ಲಿನ ಘಟನೆಗಳು ಮೂಢನಂಬಿಕೆಗಳನ್ನು ಹರಡುತ್ತಿವೆ ಎಂದು ಸ್ಪೀಕರ್ ಹೇಳಿದ್ದರು. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಸ್ಪೀಕರ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು. ಯಾರಾದರೂ ಎಲ್ಲೋ ಕುಳಿತು ಹೇಳಿದರೆ ಹಿಂದೂ ಧರ್ಮ ಮತ್ತು ದೇವರುಗಳು ಕಣ್ಮರೆಯಾಗುವುದಿಲ್ಲ ಎಂದು ಸಾಂಸ್ಕøತಿಕ ಮತ್ತು ಚಿತ್ರರಂಗದ ಪ್ರಮುಖರು ಕೂಡ ಮುಂದೆ ಬಳಿಕ ಹೇಳಿಕೆ ನೀಡಿದ್ದರು.