ನವದೆಹಲಿ: ರೈಲು ಚಾಲಕರು ಮತ್ತು ಗಾರ್ಡ್‌ಗಳು ಸೇರಿದಂತೆ ಸಿಬ್ಬಂದಿಯ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ವಿವರ ಮತ್ತು ಕರ್ತವ್ಯದಲ್ಲಿದ್ದಾಗ ಅವರು ತೆಗೆದುಕೊಳ್ಳುತ್ತಿರುವ ಔಷಧಿಗಳ ಮಾಹಿತಿ ನೀಡುವಂತೆ ರೈಲ್ವೆ ವಲಯಗಳಿಗೆ ರೈಲ್ವೆ ಮಂಡಳಿಯು ಸೂಚಿಸಿದೆ.

ಸಿಬ್ಬಂದಿ ಜೀವನಶೈಲಿ, ಉದ್ಯೋಗ ಸಂಬಂಧಿತ ವಿವಿಧ ರೀತಿಯ ಕಾಯಿಲೆಗಳು ಮತ್ತು ರೈಲು ಸಿಬ್ಬಂದಿಯ ಜೀವನಶೈಲಿಯ ಮೇಲೆ ಕೆಲಸದಿಂದಾಗುತ್ತಿರುವ ಪರಿಣಾಮಗಳ ಕುರಿತ ಮಾಹಿತಿ ಮತ್ತು ದತ್ತಾಂಶಗಳನ್ನು ನೀಡುವಂತೆ ಸೂಚಿಸಿದೆ.
ಈ ವಿವರಗಳ ಜೊತೆಗೆ, ಸಿಬ್ಬಂದಿಯ ನಿಯಮಿತ ವೈದ್ಯಕೀಯ ಪರೀಕ್ಷೆಯ (ಪಿಎಂಇ) ಸದ್ಯದ ವ್ಯವಸ್ಥೆಯಲ್ಲಿ ಸಮಯದ ಬದಲಾವಣೆಯೂ ಸೇರಿದಂತೆ, ಏನಾದರೂ ಪರಿಷ್ಕರಣೆಯ ಅಗತ್ಯವಿದೆಯೇ ಎಂಬುದರ ಕುರಿತು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ತಿಳಿಸುವಂತೆಯೂ ಮಂಡಳಿಯೂ ಸೂಚಿಸಿದೆ.
ರೈಲುಗಳ ಸುರಕ್ಷಿತ ಕಾರ್ಯಾಚರಣೆಗೂ, ಸಿಬ್ಬಂದಿ ಕಾಯಿಲೆಗಳಿಗೂ ಸಂಬಂಧವಿದೆಯೇ ಎಂಬುದರ ಪತ್ತೆಗೆ ರೈಲ್ವೆ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ತೀವ್ರ ಮಾನಸಿಕ ಒತ್ತಡದಂತಹ ಜೀವನಶೈಲಿ ಕಾಯಿಲೆಗಳು ಹೆಚ್ಚುತ್ತಿರುವ ಬಗ್ಗೆ ರೈಲು ಸಿಬ್ಬಂದಿಯ ಸಂಘಗಳು ಆಗಾಗ್ಗೆ ಕಳವಳ ವ್ಯಕ್ತಪಡಿಸಿವೆ.