ಕಾಸರಗೋಡು: ಕೇರಳದ ಎಡರಂಗ ಆಡಳಿತದ ದುರಾಡಳಿತದಿಂದ ಜನಸಾಮನ್ಯರು ನಿರಂತರ ಸಂಕಷ್ಟ ಎದುರಿಸುವಂತಾಗಿದೆ ಎಂಬುದಾಗಿ ಬಿಎಂಎಸ್ ಜಿಲ್ಲಾಧ್ಯಕ್ಷ ವಿ.ವಿ.ಬಾಲಕೃಷ್ಣನ್ ತಿಳಿಸಿದ್ದಾರೆ. ಅವರು ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಭಾನುವಾರ ಕಾಸರಗೋಡಿನಲ್ಲಿ ನಡೆದ ವಿಶ್ವಕರ್ಮ ಜಯಂತಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ ಕಾರ್ಮಿಕ ವಲಯವನ್ನು ಸರ್ಕಾರ ವಂಚಿಸುತ್ತಿದ್ದು, ಕಾರ್ಮಿಕರಿಂದ ಸುಲಿಗೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಅವರ ಮಕ್ಕಳಿಗೆ ಕಮಿಷನ್ ನೀಡಿದರಷ್ಟೆ ಇಲ್ಲಿ ಜೀವಿಸಲು ಸಾಧ್ಯ ಎಂಬ ವ್ಯವಸ್ಥೆ ಕೇರಳದಲ್ಲಿದೆ. ಕೆಎಸ್‍ಆರ್‍ಟಿಸಿ ಮತ್ತು ಕೆಎಸ್‍ಇಬಿಯಲ್ಲಿ ಸರ್ಕಾರ ಜಾರಿಗೆ ತಂದಿರುವ ಸುಧಾರಣೆಗಳು ಇದಕ್ಕೆ ಉದಹರಣೆಯಾಗಿದೆ ಎಂದು ತಿಳಿಸಿದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ವಿ.ಬಿ.ಸತ್ಯನಾಥ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ, ವಕೀಲ ಪಿ.ಮುರಳೀಧರನ್, ಎಂ.ಕೆ.ರಾಘವನ್, ಗೀತಾ ಬಾಲಕೃಷ್ಣನ್, ಸಿಂಧು ಮಾಯಿಪ್ಪಾಡಿ, ಉಪೇಂದ್ರ ಕೋಟೆಕಣಿ, ಕೆ.ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.. ಕಾರ್ಯಕ್ರಮದ ಅಂಗವಾಗಿ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಿತು. ಲೀಲಾಕೃಷ್ಣ, ಸುರೇಶ್, ರಾಜೇಶ್ ಕೈಂದಾರ್, ಶಿವನ್, ಬಾಬು ನೇತ್ರತ್ವವಹಿಸಿದ್ದರು. ಉದುಮ ಮಂಡಲ ಕಾರ್ಯದರ್ಶಿ ಭಾಸ್ಕರ ಪೆÇಯಿನಾಚಿ ಸ್ವಾಗತಿಸಿದರು. ಕಾಸರಗೋಡು ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ರಿಜೇಶ್ ಜೆ.ಪಿ.ನಗರ ವಂದಿಸಿದರು.