ಸಮರಸ ಚಿತ್ರಸುದ್ದಿ: ಕಾಸರಗೋಡು: ಮಾತೆ ಮೇರಿ ಅವರ ಜನ್ಮ ದಿನದ ಅಂಗವಾಗಿ ಕ್ರೈಸ್ತಬಾಂಧವರು ತೆನೆ ಹಬ್ಬವನ್ನು ಆಚರಿಸಿದರು. ಈ ನಿಟ್ಟಿನಲ್ಲಿ ಕಾಸರಗೋಡು ರೈಲು ನಿಲ್ದಾಣ ರಸ್ತೆಯ ಶೋಕಮಾತಾ ಇಗರ್ಜಿಯಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮಕ್ಕೆ ವಂದನೀಯ ಫಾದರ್ ಲೂಯಿಸ್ ಕುಟಿನೋ ಚಾಲನೆ ನೀಡಿದರು. ರಿಚರ್ಡ್ ಕ್ರಾಸ್ತಾ, ಶೋಕಮಾತಾ ಇಗರ್ಜಿಯ ಸ್ಟಾನ್ಲಿ ಡಿಸಿಲ್ವಾ ಉಪಸ್ಥಿತರಿದ್ದರು.