ಕೊಟ್ಟಾಯಂ: ‘ಭಾರತ’ ಎಂಬ ಹೆಸರು ದೇಶದ ಬಹುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಪ್ರತಿಕ್ರಿಯಿಸಿದ್ದಾರೆ.
ಸಂಕುಚಿತ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿಯವರ ಈ ನಡೆ ಅವಕಾಶವಾದಿತನವಾಗಿದೆ ಎಂದು ಕುಮ್ಮನಂ ಹೇಳಿದ್ದಾರೆ. ಎಲ್ಲ ಸ್ಥಳನಾಮಗಳು ಭಾರತೀಯ ಸ್ವರೂಪವನ್ನು ಪ್ರತಿಬಿಂಬಿಸಬೇಕೆಂಬ ನಿಲುವು ತಳೆದ ವ್ಯಕ್ತಿ ಮುಖ್ಯಮಂತ್ರಿ. ಆದರೆ ಮುಖ್ಯಮಂತ್ರಿಗಳ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ಬದಲಾಯಿಸಿರುವುದು ಅಚ್ಚರಿ ಮೂಡಿಸಿದೆ ಎಂದರು. ಫೇಸ್ ಬುಕ್ ಪೋಸ್ಟ್ ಮೂಲಕ ಕುಮ್ಮನಂ ಪ್ರತಿಕ್ರಿಯೆ ನೀಡಿದ್ದಾರೆ.
'ಸ್ಥಳನಾಮಗಳಿಗೆ ಸ್ಥಳೀಯ ಗುಣಲಕ್ಷಣಗಳನ್ನು ಮರುಸ್ಥಾಪಿಸಲು ಟ್ರಿವೇಂಡ್ರಂ-ತಿರುವನಂತಪುರಂ, ಅಲೆಪ್ಪಿ- ಆಲಪ್ಪುಳ, ಕ್ವಿಲೋನ್- ಕೊಲ್ಲಂ, ಮದ್ರಾಸ್-ಚೆನ್ನೈ ಮತ್ತು ಬಾಂಬೆ ಮುಂಬೈ ಆಯಿತು. ವಿದೇಶಿ ಹೇರಿದ ಸ್ಥಳನಾಮಗಳಿಗೆ ವಿರೋಧದ ಬಹಿರಂಗ ಘೋಷಣೆಯೂ ಆಗಿತ್ತು. ಸಿಪಿಎಂನ ರಾಷ್ಟ್ರೀಯ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಬರೆದಿರುವ ಬೋರ್ಡ್‍ನಲ್ಲಿ ಭಾರತ್ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಎಂದೂ ಬರೆಯಲಾಗಿದೆ ಎಂದು ಕುಮ್ಮನಂ ತಿಳಿಸಿ ಛೇಡಿಸಿರುವರು.