ಕಾಸರಗೋಡು: ಕಳವು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಮಡು ತಿರುಗಾಡುತ್ತಿದ್ದ ಆರೋಪಿಯನ್ನು ಆತನ ಮನೆಯನ್ನು ಸುತ್ತುವರಿದು ಪೊಲೀಸರು ಬಂಧಿಸಿದ್ದಾರೆ. ಮೊಗ್ರಾಲ್‍ಪುತ್ತೂರು ಕಲ್ಲಂಗೈ ನಿವಾಸಿ ಅಬ್ದುಲ್ ಜಂಶೀದ್ ಬಂಧಿತ. ನಗರಠಾಣೆ ಎಸ್.ಐ ಎಂ.ವಿ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಈತನ ವಿರುದ್ಧ ಕಾಸರಗೋಡು ನಗರ ಠಾಣೆಯಲ್ಲಿ ನಾಲ್ಕು ಕಳವು ಪ್ರಕರಣ ಅಲ್ಲದೆ, ಮಲಪ್ಪುರಂನ ಕುಟ್ಟಿಪುರಂ ಠಾಣೆಯಲ್ಲೂ ಕೇಸು ದಾಖಲಾಗಿದೆ.
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಮಡಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿಮಾಡಿತ್ತು. ಈತನನ್ನು ನ್ಯಾಐಆಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗಬಂಧನ ವಿಧಿಸಲಾಗಿದೆ.