ನವದೆಹಲಿ: ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸ್ ಆರಂಭಿಸಲು ಬಯಸುವ ಆಸ್ಪತ್ರೆಗಳಿಗಾಗಿ ಹೊಸ ಕರಡು ಮಾರ್ಗದರ್ಶಿ ಸೂತ್ರಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಶುಕ್ರವಾರ ಬಿಡುಗಡೆ ಮಾಡಿದೆ.
ನವದೆಹಲಿ: ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸ್ ಆರಂಭಿಸಲು ಬಯಸುವ ಆಸ್ಪತ್ರೆಗಳಿಗಾಗಿ ಹೊಸ ಕರಡು ಮಾರ್ಗದರ್ಶಿ ಸೂತ್ರಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಶುಕ್ರವಾರ ಬಿಡುಗಡೆ ಮಾಡಿದೆ.
ಅದರ ಪ್ರಕಾರ, ಹೊಸದಾಗಿ ಕೋರ್ಸ್ ಆರಂಭಿಸಲು ಬಯಸುವ ಆಸ್ಪತ್ರೆಗಳಲ್ಲಿ ಕನಿಷ್ಠ 200 ಹಾಸಿಗೆಗಳ ಸಾಮರ್ಥ್ಯದ ಸೌಲಭ್ಯವಿರಬೇಕು, ಇದರಲ್ಲಿ ಶೇ 75ರಷ್ಟು ವರ್ಷಪೂರ್ತಿ ಬಳಕೆಯಾಗಿರಬೇಕು.
ಅಲ್ಲದೆ, ಆಸ್ಪತ್ರೆಗಳು ಕಡ್ಡಾಯವಾಗಿ ಜೀವರಾಸಾಯನ ವಿಜ್ಞಾನ, ನರರೋಗ, ಸೂಕ್ಷ್ಮಜೀವವಿಜ್ಞಾನ ಮತ್ತು ರೇಡಿಯೊ ಡಯಾಗ್ನೋಸಿಸ್ ವಿಭಾಗಗಳನ್ನು ಹೊಂದಿರಬೇಕು ಎಂದು ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸಾರ್ವಜನಿಕರು ತಮ್ಮ ಸಲಹೆಗಳನ್ನು ಸೆಪ್ಟೆಂಬರ್ 15ರವರೆಗೂ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.