ಕೋಝಿಕ್ಕೋಡ್: ಡ್ರಗ್ಸ್ ಮಾಫಿಯಾ ಜೊತೆ ನಂಟು ಹೊಂದಿದ್ದ ಪೋಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಕೋಟಂಚೇರಿ ಠಾಣೆಯ ಸಿವಿಲ್ ಪೋಲೀಸ್ ಅಧಿಕಾರಿ ರಾಜಿಲೇಶ್ ಅಮಾನತುಗೊಂಡವರು.
ಅವರು ಡ್ರಗ್ಸ್ ಗ್ಯಾಂಗ್‍ಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದನ್ನು ಸಾಬೀತುಪಡಿಸುವ ಚಿತ್ರಗಳನ್ನು ಸಹ ಪೋಲೀಸರು ಪತ್ತೆಹಚ್ಚಿದ್ದಾರೆ. ಬಳಿಕ ನಡೆಸಿದ ತನಿಖೆಯಡಿ ರಾಜಿಲೇಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಡ್ರಗ್ಸ್ ಮಾಫಿಯಾ ಸದಸ್ಯನಾದ ತಾಮರಸ್ಸೆರಿ ಮೂಲದ ಅಯೂಬ್‍ನ ಚಿತ್ರಗಳು ಪೋಲೀಸರಿಗೆ ಲಭಿಸಿದೆ. ಇದಾದ ಬಳಿಕ ಪೋಲೀಸರು ರಾಜೀಲೇಶ್ ಅವರನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ್ದರು. ಒಂದೂವರೆ ತಿಂಗಳ ಹಿಂದೆ ತೆಗೆದ ರಾಜಿಲೇಶ್ ಮತ್ತು ಅಯೂಬ್ ಖಾನ್ ಅವರ ಚಿತ್ರ ಪೋಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ನಿಬಿಲ್ ಎಂಬುವರ ಹಿತ್ತಲಿನಲ್ಲಿ ತೆಗೆದಿರುವುದು ಪತ್ತೆಯಾಗಿದೆ.
ತಾಮರಸ್ಸೆರಿಯ ಅಂಚೆ ಕಚೇರಿ ಬಳಿ ಎಂಡಿಎಂಎ ಮಾರಾಟ ಮಾಡಿದ ಪ್ರಕರಣದ ಆರೋಪಿ ಅತುಲ್ ಜತೆ ರಾಜಿಲೇಶ್ ನಿಂತಿರುವ ಛಾಯಾಚಿತ್ರವೂ ಬಿಡುಗಡೆಯಾಗಿದೆ.