ಕಾಸರಗೋಡು: ರೋಟರಿ ಕಾಸರಗೋಡಿನ ಈ ವರ್ಷದ ರೋಟರಿ ನೇಷನ್ ಬಿಲ್ಡರ್ ಪ್ರಶಸ್ತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾಸರಗೋಡು ಜಿಲ್ಲಾ ಉಪನಿರ್ದೇಶಕ (ಡಿಡಿಇ) ಎನ್.ನಂದಿಕೇಶನ್ ಅವರಿಗೆ ಪ್ರದಾನ ಮಾಡಲಾಯಿತು.
ಕಾಸರಗೋಡು ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಸಹಾಯಕ ಗವರ್ನರ್ ಸಿ.ಎ. ವಿಶಾಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷ ಗೌತಮ ಭಕ್ತ ಅಧ್ಯಕ್ಷತೆ ವಹಿಸಿದ್ದರು. ಸರ್ವಮಂಗಳರಾವ್ ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು. ಎಂ.ಕೆ.ರಾಧಾಕೃಷ್ಣನ್, ಜಂಟಿ ಕಾರ್ಯದರ್ಶಿ ನಿಹಾಲ್ ಜಾಯ್, ಕಣ್ಣೂರು ಪ್ರಾದೇಶಿಕ ವೇದಿಕೆ ಅಧ್ಯಕ್ಷ ದಿನೇಶ್ ಎಂ.ಟಿ., ಡಾ.ನಾರಾಯಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ನಂದಿಕೇಶನ್ ಅವರು 1991 ರಿಂದ ಉದ್ಯಾವರ, ದೇಲಂಪಾಡಿ ಸರಕಾರಿ ಕನ್ನಡ ಮಾಧ್ಯಮ ಶಾಲೆ, ಡಯೆಟ್ ಮಾಯಿಪ್ಪಾಡಿಯ ಕಾಸರಗೋಡು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಸಹಿತ ವಿವಿಧೆಡೆ ಶಿಕ್ಷಕರಾಗಿ ಮಂಜೇಶ್ವರ ಹಾಗೂ ಕಾಸರಗೋಡು ಉಪಜಿಲ್ಲ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಶಿಕ್ಷಕ, ಎಇಒ, ಡಿಇಒ ಮತ್ತು ಡಿಡಿಇ ಹುದ್ದೆಯಲ್ಲಿ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಪನಯಾಲ್ ನೆಲ್ಲಿಯಡ್ಕ ಮೂಲದ ನಂದಿಕೇಶನ್ ಈಗ ಪ್ರಸಕ್ತ ಮುಕುನ್ನೋತ್‍ನಲ್ಲಿ ನೆಲೆಸಿದ್ದಾರೆ.