ಕಾಸರಗೋಡು: ಏಕಾಂಗಿ ಮಹಿಳೆಯರು ಮತ್ತು ಮಕ್ಕಳಿಗೆ ಕುಟುಂಬಶ್ರೀ ಜಾರಿಗೆ ತಂದಿರುವ 'ಸ್ನೆಹಿತ'ಯೋಜನೆ ಮಹತ್ವದ ಸಾಧನೆ ನಡೆಸಿದೆ.ಕಳೆದ ಆರು ವರ್ಷಗಳಿಂದ 'ಸ್ನೆಹಿತ'ಯೋಜನೆಯನ್ವಯ 2213 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1858 ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. 203 ಜನರಿಗೆ ತಾತ್ಕಾಲಿಕ ಆಶ್ರಯ ಮತ್ತು 208 ಜನರಿಗೆ ಕಾನೂನು ನೆರವು ಕಲ್ಪಿಸಲಾಗಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ 2017 ಸೆಪ್ಟೆಂಬರ್ 2 ರಂದು ಜಿಲ್ಲೆಯ ಕಾಞಂಗಾಡ್ ಕೇಂದ್ರವಾಗಿ ಸ್ನೇಹಿತ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ.
ಏಳನೇ ವರ್ಷಕ್ಕೆ ಹೊಸ ಕಟ್ಟಡ:
ಎಳನೆ ವರ್ಷಕ್ಕೆ ಕಾಲಿಡುತ್ತಿರುವ ಸ್ನೇಹಿತಾ ಯೋಜನೆಗೆ ಹೊಸ ಕಟ್ಟಡ ಮಂಜೂರಾಘಿ ಲಭಿಸಿದ್ದು, ಸಎ. 19ರಂದು ಉದ್ಘಾಟನೆಗೊಳ್ಳಲಿದೆ. ಕಾಞಂಗಾಡ್‍ನ ಕೊವ್ವಲ್ ಪಲ್ಲಿಯಲ್ಲಿ 'ಸ್ನೇಹಿತಾ' ಹೆಲ್ಪ್ ಡೆಸ್ಕ್ ಯೋಜನೆಗಾಗಿ ಸುಸಜ್ಜಿತ ಕಟ್ಟಡ ತಲೆಯೆತ್ತಿದೆ. ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಜಾಫರ್ ಮಲಿಕ್ ಅವರು ಸೆಪ್ಟೆಂಬರ್ 19 ರಂದು ಬೆಳಿಗ್ಗೆ 10ಕ್ಕೆ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಸ್ನೇಹಿತಾ ತಾತ್ಕಾಲಿಕ ಆಶ್ರಯವಾಗಿ ಸೌಕರ್ಯ ಕಲ್ಪಿಸುತ್ತಿದೆ. ಮಹಿಳೆಯರು ಮತ್ತು ಮಕ್ಕಳಿಗಾಗಿ ಸಮಾಲೋಚನೆ, ಟೆಲಿ-ಕೌನ್ಸೆಲಿಂಗ್, ತಾತ್ಕಾಲಿಕ ಆಶ್ರಯ ಮತ್ತು ಕಾನೂನು ನೆರವು ಸೇವೆಗಳು ಸ್ನೇಹಿತನ ಮೂಲಕ ಲಭಿಸಲಿದೆ. ಪೆÇಲೀಸ್, ಐಸಿಡಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಮಾಜಿಕ ನ್ಯಾಯ ಇಲಾಖೆ, ಡಿಎಲ್‍ಎಸ್‍ಎ, ಸರ್ಕಾರಿ ಸರ್ಕಾರೇತರ ಇಲಾಖೆಗಳು, ಎನ್‍ಜಿಒಗಳು ಮತ್ತು ಇತರ ಏಜೆನ್ಸಿಗಳೊಂದಿಗೆ ಸ್ನೇಹಿತಾ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.