ಕೊಚ್ಚಿ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಜನಂ ಟಿವಿಗೆ ನೀಡಿರುವ ಮಾಹಿತಿ ಮತ್ತೊಮ್ಮೆ ವಿವಾದಕ್ಕೆ ತೆರೆದುಕೊಂಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗಲ್ಫ್ ರಾಷ್ಟ್ರಗಳಲ್ಲಿ ಬೇನಾಮಿ ವ್ಯವಹಾರಗಳನ್ನು ಹೊಂದಿದ್ದಾರೆ, ಅವೆಲ್ಲವೂ ಯುಎಇ, ಶಾರ್ಜಾ ಮತ್ತು ಅಜ್ಮಾನ್‍ನಲ್ಲಿವೆ ಮತ್ತು ಅವರು ವ್ಯಾಪಾರ ಉದ್ದೇಶಕ್ಕಾಗಿ ಕಾಲಕಾಲಕ್ಕೆ ಗಲ್ಫ್‍ಗೆ ಹೋಗುತ್ತಾರೆ ಎಂದು ಸ್ವಪ್ನಾ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಜಾರಿಯಾಗುತ್ತಿರುವ ‘ಕೆ’ ಯೋಜನೆಗಳೆಲ್ಲ ‘ವಿ’ ಯೋಜನೆಗಳಾಗಿದ್ದು, ಯೋಜನೆ ರೂಪಿಸುವಾಗ ದೊಡ್ಡ ಶಾರ್ಕ್‍ಗಳನ್ನು (ವಿಜಯನ್) ಪತ್ತೆಹಚ್ಚಿ ಅವರಿಂದ ಮೊದಲು ಹಣ ತೆಗೆದುಕೊಳ್ಳುತ್ತಾರೆ ಎಂದು ಸ್ವಪ್ನಾ ಬಹಿರಂಗವಾಗಿ ಹೇಳಿದ್ದಾರೆ.
ಇದು ಕೇವಲ ಕಾಗದದ ಯೋಜನೆ ಎಂದು ನಂತರ ಮಾತ್ರ ತಿಳಿಯುತ್ತದೆ. ಮುಖ್ಯಮಂತ್ರಿ ಹಾಗೂ ಅವರ ಪರಿವಾರದವರನ್ನು ವಿರೋಧಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಶಿವಶಂಕರ್ ನೇತೃತ್ವದ ಐಟಿ ವಿಭಾಗದಲ್ಲಿ ಹೆಚ್ಚು ಪೇಪರ್ ಪ್ರಾಜೆಕ್ಟ್ ಗಳಿವೆ ಎಂದು ಸ್ವಪ್ನಾ ಹೇಳಿದರು. ಇಂತಹ ಯೋಜನೆಗೆ ಸಂಬಂಧಿಸಿದಂತೆ ಕ್ಲಿಫ್ ಹೌಸ್ ನಲ್ಲಿ ನಡೆದ ಚರ್ಚೆಯಲ್ಲಿ ತಾನೂ ಭಾಗವಹಿಸಿದ್ದೆ ಎಂದು ಸ್ವಪ್ನಾ ತಿಳಿಸಿದ್ದರು. ಇಂಥದ್ದೊಂದು ಚರ್ಚೆ ದುಬೈನಲ್ಲೂ ನಡೆದಿದೆ. ಆದರೆ ವೀಣಾ ಅವರು ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ. ತನಗೆ ವೀಣಾ ಅವರ ಕಂಪನಿ ಎಕ್ಸಾಲಾಜಿಕ್ ಸೊಲ್ಯೂಷನ್ಸ್‍ನಲ್ಲಿ ಕೆಲಸ ನೀಡಲಾಯಿತು. ಶಿವಶಂಕರ್ ಇದಕ್ಕೆ ಚಾಲನೆ ನೀಡಿದ್ದರು. ಆದರೆ ತನ್ನ ಮಕ್ಕಳು ತಿರುವನಂತಪುರದಲ್ಲಿ ಓದುತ್ತಿರುವುದರಿಂದ ನಿರಾಕರಿಸಿರುವುದಾಗಿ ಸ್ವಪ್ನಾ ಹೇಳಿದ್ದಾರೆ.
ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಇ.ಪಿ. ಜಯರಾಜನ್ ಅವರ ಮಗ ಎ.ಐ. ಕ್ಯಾಮೆರಾ ಯೋಜನೆಯನ್ನು ಕಾರ್ಯಗತಗೊಳಿಸಬೇಕಿತ್ತು. ಜಯರಾಜನ್ ಅವರು ಕೈಗಾರಿಕಾ ಸಚಿವರಾಗಿದ್ದಾಗ ಈ ಯೋಜನೆ ಕುರಿತು ಚರ್ಚೆ ನಡೆದಿತ್ತು. ಈ ವಿಚಾರವಾಗಿ ದುಬೈನಲ್ಲಿ ಎರಡು ಬಾರಿ ಜಯರಾಜನ್ ಪುತ್ರನನ್ನು ಭೇಟಿ ಮಾಡಿದ್ದೆ. ಎಐ ಕ್ಯಾಮರಾ ಭ್ರμÁ್ಟಚಾರದಿಂದ ತುಂಬಿದೆ ಎಂದು ಸ್ವಪ್ನಾ ಹೇಳಿದ್ದಾರೆ.
ಕಾಗದದ ಕಂಪನಿಯನ್ನು ನೋಂದಾಯಿಸುವ ಮೂಲಕ ತನ್ನನ್ನು ನೇಮಿಸಲಾಯಿತು. ಪ್ರೈಸ್ ವಾಟರ್‍ಕೂಪರ್ಸ್ ಗೆ ನೇಮಿಸಿಕೊಳ್ಳಲು ನಿರಾಕರಿಸಿದಾಗ, ಬಳಿಕ ಔರಂಗಾಬಾದ್ ಮೂಲದ ವಿಷನ್ ಟೆಕ್ನಾಲಜೀಸ್ ಹೆಸರಿನಲ್ಲಿ ಕಂಪನಿಯನ್ನು ನೋಂದಾಯಿಸಿದರು. ಅದೇ ಕಂಪನಿಯ ಹೆಸರಿನಲ್ಲಿ ಕೆಪೋೀನ್‍ನಲ್ಲಿ ಒಬ್ಬರನ್ನು ನೇಮಿಸಲಾಗಿದೆ. ಈಗ ಅಂತಹ ಯಾವುದೇ ಕಂಪನಿ ಅಸ್ತಿತವದಲ್ಲಿ ಇಲ್ಲ ಎಂದ ಸ್ವಪ್ನಾ, ಮುಖ್ಯಮಂತ್ರಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದಿದ್ದರು.