ಕಾಸರಗೋಡು: ತೆಂಗು ಅಭಿವೃದ್ಧಿ ಮಂಡಳಿ ಮತ್ತು ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 2 ರಂದು ಕಾಸರಗೋಡು ಸಿಪಿಸಿಆರ್‍ಐ ಜೆ.ಎ ಸಭಾಂಗಣದಲ್ಲಿ ಜರುಗಲಿರುವ 25 ನೇ ವಿಶ್ವ ತೆಂಗು ದಿನಾಚರಣೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಐಸಿಎಆರ್ ನ ಸಹಾಯಕ ಮಹಾನಿರ್ದೇಶಕ (ಹಣ್ಣು ಮತ್ತು ತೋಟದ ಬೆಳೆಗಳು) ಡಾ.ವಿ.ಬಿ.ಪಟೇಲ್, ತೆಂಗು ಮಂಡಳಿ ಉಪಾಧ್ಯಕ್ಷ ಬಿ.ಎಚ್.ರೇಣುಕುಮಾರ್, ಬ್ಯಾಮ್ಕೊ ಅಧ್ಯಕ್ಷ ಪಿ.ಆರ್.ಮುರಳೀಧರನ್ ಭಾಗವಹಿಸಲಿದ್ದಾರೆ. ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ. ಬಿ.ಹೆಬ್ಬಾರ್, ತೆಂಗು ಅಭಿವೃದ್ಧಿಮಂಡಳಿ ಮುಖ್ಯ ತೆಂಗು ಅಭಿವೃದ್ಧಿ ಅಧಿಕಾರಿ ಡಾ.ಬಿ.ಹನುಮಂತಗೌಡ ಪ್ರಾಸ್ತಾವಿಕ ಮತುಗಳನ್ನಾಡಲಿದ್ದಾರೆ. ಐಸಿಎಆರ್, ತೆಂಗು ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಪ್ರಗತಿಪರ ರೈತರು, ಉದ್ಯಮಿಗಳು, ಉತ್ಪಾದಕರು ಮತ್ತು ಸಂಶೋಧಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.