ಕೋಝಿಕ್ಕೋಡ್: ಕರಿಪ್ಪೂರ್ ಪೋಲೀಸ್ ಠಾಣೆಗೆ ಜಪ್ತಿ ನೋಟಿಸ್ ನೀಡಿದ ಅಪೂರ್ವ ಘಟನೆ ನಡೆದಿದೆ. ಕೆಸಿ ಕೊಕೊನಟ್ ಪ್ರೊಡಕ್ಷನ್ ಎಂಬ ಕಂಪನಿಯ ಒಡೆತನದ ಬಾಡಿಗೆ ಕಟ್ಟಡದಲ್ಲಿ ಪೋಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದೆ.
ಈ ಕಂಪನಿ ಹೆಸರಿನಲ್ಲಿ 5 ಕೋಟಿ 69 ಲಕ್ಷ ರೂ. ಸಾಲ ಪಡೆಯಲಾಗಿದೆ. ಸಾಲ ಮರುಪಾವತಿ ಮಾಡದ ಕಾರಣ ಕೆನರಾ ಬ್ಯಾಂಕ್ ಜಪ್ತಿ ನೋಟಿಸ್ ನೀಡಿದೆ
17.5 ಸೆಂಟ್ಸ್ ಜಮೀನು ಹಾಗೂ ಪೋಲೀಸ್ ಠಾಣೆ ಒಳಗೊಂಡ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ನಿರ್ಧರಿಸಿದೆ.