ತಿರುವನಂತಪುರಂ: ಅನಧಿಕೃತ ಸಾಲದ ಆ್ಯಪ್‍ಗಳನ್ನು ಬಳಸಿ ಸಾಲ ಪಡೆದು ವಂಚನೆಗೊಳಗಾದವರ ವಿರುದ್ಧ ದೂರು ದಾಖಲಿಸಲು ಪೋಲೀಸರು ವ್ಯವಸ್ಥೆ ಕಲ್ಪಿಸಿದ್ದಾರೆ.
ವಾಟ್ಸಾಪ್ ಮೂಲಕ ದಿನದ 24 ಗಂಟೆಯೂ 94 97 98 09 00 ಪೋಲೀಸರಿಗೆ ದೂರು ನೀಡಬಹುದು.
ಪಠ್ಯ, ಪೋಟೋ, ವಿಡಿಯೋ ಮತ್ತು ಧ್ವನಿ ಮೂಲಕ ದೂರು ನೀಡಬಹುದು. ನೇರವಾಗಿ ಕರೆ ಮಾಡಲು ಸಾಧ್ಯವಿಲ್ಲ. ಅಗತ್ಯ ಬಿದ್ದರೆ ಪೋಲೀಸರು ದೂರುದಾರರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುತ್ತಾರೆ. ತಿರುವನಂತಪುರಂ ಪೋಲೀಸ್ ಪ್ರಧಾನ ಕಛೇರಿಯಲ್ಲಿ ಈ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
ಅನಧಿಕೃತ ಸಾಲದ ಅಪ್ಲಿಕೇಶನ್ ವಿರುದ್ಧ ಪೋಲೀಸ್ ಅಭಿಯಾನವೂ ಪ್ರಾರಂಭವಾಗಿದೆ. ಜಿಲ್ಲಾ ಪೋಲೀಸ್ ವರಿಷ್ಠರೂ ಪ್ರಚಾರಕ್ಕೆ ಆಗಮಿಸಲಿದ್ದಾರೆ.