ಕಾಸರಗೋಡು: ಸಹಾಯಕ ಜಿಲ್ಲಾಧಿಕಾರಿ ಸಂಚರಿಸಿದ ಕಾರು ಕಾಸರಗೋಡು-ಕಾಞಂಗಾಡು ಕೆಎಸ್‍ಟಿಪಿ ರಸ್ತೆಯ ಚೆಮ್ನಾಡ್ ಶಾಲೆ ಸನಿಹ ಮಗುಚಿಬಿದ್ದ ಪರಿಣಾಮ ಸಹಾಯಕ ಜಿಲ್ಲಾಧಿಕಾರಿ ದೀಪಕ್ ಕೈನಿಕ್ಕರ ಹಾಗೂ ಗನ್‍ಮ್ಯಾನ್ ರಂಜಿತ್ ಗಾಯಗೊಂಡಿದ್ದಾರೆ.
ಅಧಿಕೃತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕಾಸರಗೋಡಿಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ದೀಪಕ್ ಕೈನಿಕ್ಕರ ಅವರ ಸೊಂಟದ ಭಾಗಕ್ಕೆ ಗಂಭೀರ ಗಾಯಗಳುಂಟಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಉನ್ನತ ಚಿಕಿತ್ಸೆಗಾಗಿ ಕಣ್ಣೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.