ಕುಂಬಳೆ: ‘ಎಲ್ಲರಿಗೂ ಭೂಮಿ, ಎಲ್ಲ ಭೂಮಿಗೆ ದಾಖಲೆ’ ಎಂಬ ಪರಿಕಲ್ಪನೆಯೊಂದಿಗೆ ಎಲ್ಲ ಸೇವೆಗಳನ್ನು ಸ್ಮಾರ್ಟ್ ಮಾಡುವ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೊಳಿಸಿರುವ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ. ಎಲ್ಲಾ ಭೂಮಾಲೀಕರನ್ನು ಪತ್ತೆ ಮಾಡಿ ಸಂಪೂರ್ಣ ಭೂ ಪ್ರದೇಶವನ್ನು ಕಾಯ್ದಿರಿಸುವುದು ಮತ್ತು ದೂರುಗಳಿಲ್ಲದೆ ವ್ಯವಸ್ಥೆಯನ್ನು ಕಾಪಿಡುವುದು ಈ ಯೋಜನೆಯ ಗುರಿಯಾಗಿದೆ. ಮಂಜೇಶ್ವರ ತಾಲೂಕಿನ ಬಂಬ್ರಾಣ ಗ್ರಾಮದಲ್ಲಿ ಮೊದಲ ಹಂತದಲ್ಲಿ ಆರಂಭಗೊಂಡ ಗಡಿ ನಿರ್ಣಯ ಕಾಯ್ದೆಯ ಕಲಂ 9(2)ರ ಅಡಿಯಲ್ಲಿ ಸಮೀಕ್ಷೆ ಪ್ರಕಟಿಸಲಾಗಿದೆ.
ನಾಗರಿಕರು ‘ನನ್ನ ಭೂಮಿ’ ಪೋರ್ಟಲ್‍ಗೆ ಲಾಗ್ ಇನ್ ಮಾಡುವ ಮೂಲಕ ಸಾರ್ವಜನಿಕರು ಈ ಗ್ರಾಮದಲ್ಲಿ ಡಿಜಿಟಲ್ ಸಮೀಕ್ಷೆ ಮಾಡಿದ ಭೂಮಿಯ ಮಾಹಿತಿಯನ್ನು ಪರಿಶೀಲಿಸಬಹುದು. ಆನ್‍ಲೈನ್ ಮೂಲಕ ದೂರು ನೀಡಲೂ ವ್ಯವಸ್ಥೆ ಲಭ್ಯವಿದೆ. ಇದಕ್ಕಾಗಿ 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ನಂತರ ದಾಖಲೆಗಳನ್ನು ಅಂತಿಮಗೊಳಿಸಿ ಪ್ರಕಟಿಸಿ ಕಂದಾಯ ಆಡಳಿತಕ್ಕೆ ನೀಡಲಾಗುವುದು. ನಂತರ ಭೂಮಿಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಆನ್‍ಲೈನ್‍ನಲ್ಲಿ ಮಾತ್ರ ಲಭ್ಯವಿರುತ್ತವೆ ಆದ್ದರಿಂದ ಭೂಮಾಲೀಕರು ಸಹಕರಿಸಬೇಕು ಎಂದು ಕಂದಾಯ ಇಲಾಖೆ ವಿನಂತಿಸಿದೆ. ಈ ಗ್ರಾಮದ ಭೂ ಮಾಲೀಕರು 'ನನ್ನ ಭೂಮಿ' ಪೋರ್ಟಲ್ ಮೂಲಕ ಲಾಗಿನ್ ಆಗಿ ಸಮೀಕ್ಷೆ ಮಾಹಿತಿಯನ್ನು ಪರಿಶೀಲಿಸಬಹುದು. ಯಾವುದೇ ರೀತಿಯ ದೂರುಗಳಿದ್ದವರು ದೂರವಾಣಿ ಮೂಲಕ ಉಸ್ತುವಾರಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ನನ್ನ ಭೂಮಿ ಪೋರ್ಟಲ್ ಲಾಗಿನ್ ವಿಳಾಸ À htpp://entebhoomi.kerala.gov.in . ಚಾರ್ಜ್ ಆಫೀಸರ್ ಪೋನ್ 9446018746 ಸಂಪರ್ಕಿಸಲು ತಿಳಿಸಲಾಗಿದೆ.