ಕಾಸರಗೋಡು: ಕೊಚ್ಚಿನ್ ಕನ್ನಡ ಸಂಘಕ್ಕೆ ಮತ್ತು ಕನ್ನಡ ಸಂಘದ ಶ್ರೀಕಾಂತ್ ಆನವಟ್ಟಿ ಅವರಿಗೆ ಕಾಸರಗೋಡು ಕನ್ನಡ ಭವನದ 2023 ನೆ ಸಾಲಿನ "ಕನ್ನಡ ಪಯಸ್ವಿನಿ ಪ್ರಶಸ್ತಿ " ನೀಡಿ ಗೌರವಿಸಲಾಯಿತು.
ಸಂಸ್ಥೆಯ ರೂವಾರಿಗಳಾದ ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಕೊಚ್ಚಿಯಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಿದರು. ಅರಿಬೈಲ್ ಗೋಪಾಲ್ ಶೆಟ್ಟಿ, ಪ್ರೊ. ಎ ಶ್ರೀನಾಥ್, ಎ ಆರ್ ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.