ಕುಂಬಳೆ: ಸಮಾಜ ಸೇವಾ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡುತ್ತಿರುವ ಬಹರೈನ್ ಕೆ. ಎಂ. ಸಿ. ಸಿ ಮಂಜೇಶ್ವರ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ಬಂಗ್ರಮಂಜೇಶ್ವರ ರಹಮತ್ ಮಜಲ್ ಸೀತಿ ಸಾಹಿಬ್ ಕಾಲೋನಿಯಲ್ಲಿ ಇಂದು(ಶುಕ್ರವಾರ) ಅಪರಾಹ್ನ 3 ಕ್ಕೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ಅವರು ಪ್ರಥಮ ಬೈತುಲ್ ರಹ್ಮಾ ಸಮರ್ಪಣೆಯನ್ನು ನೆರವೇರಿಸಲಿದ್ದಾರೆ ಎಮದು ಸಂಬಂಧಪಟ್ಟವರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಅಬ್ದುಲ್ ರೆಹಮಾನ್, ಕೋಶಾಧಿಕಾರಿ ಮುನೀರ್ ಹಾಜಿ, ಶಾಸಕ ಎಕೆಎಂ ಅಶ್ರಫ್, ಅಬ್ದುಲ್ ಲತೀಫ್ ಉಪ್ಪಳ ಗೇಟ್, ಕೆಎಂಸಿಸಿ ರಾಜ್ಯ ಉಪಾಧ್ಯಕ್ಷ ಶಾಫಿ ಪಾರೆಕಟ್ಟೆ, ಮುಸ್ಲಿಂ ಲೀಗ್ ಜಿಲ್ಲಾ ಪದಾಧಿಕಾರಿಗಳಾದ ಟಿ.ಎ.ಮೂಸಾ, ಎಂ.ಬಿ.ಯೂಸುಫ್ ಮಾತನಾಡುವರು. ಅಬ್ದುಲ್ ರೆಹಮಾನ್ ಎಂ.ಅಬ್ಬಾಸ್, ಹಾರಿಸ್ ಚೂರಿ, ಮಂಡಲ ಅಧ್ಯಕ್ಷ ಅಜೀಜ್ ಮರಿಕೆ, ಪ್ರಧಾನ ಕಾರ್ಯದರ್ಶಿ ಎ.ಕೆ.ಆರಿಫ್, ಕೋಶಾಧಿಕಾರಿ ಯು.ಕೆ.ಸೈಪುಲ್ಲಾ ತಂಙಳ್ ಹಾಗೂ ಮುಸ್ಲಿಂ ಲೀಗ್ ಹಾಗೂ ಅಂಗಸಂಸ್ಥೆಗಳ ಜಿಲ್ಲಾ, ಮಂಡಲ, ಪಂಚಾಯತ್ ಮುಖಂಡರು ಭಾಗವಹಿಸಲಿದ್ದಾರೆ.
ಸೇವೆ, ಶಿಕ್ಷಣ ಕ್ಷೇತ್ರದಲ್ಲಿ, ಸಿಎ ಮತ್ತು ಅರಿವಳಿಕೆ ಕೋರ್ಸ್‍ಗಳಲ್ಲಿ ಓದುತ್ತಿರುವ ಇಬ್ಬರು ನಿರ್ಗತಿಕ ವಿದ್ಯಾರ್ಥಿಗಳ ಅಧ್ಯಯನ ವೆಚ್ಚ, ಅನೇಕ ಬಹ್ರೇನ್ ವಲಸಿಗರಿಗೆ ವೈದ್ಯಕೀಯ ವೆಚ್ಚ ಸೇರಿದಂತೆ ಹಣಕಾಸಿನ ನೆರವು, ನಿರ್ಗತಿಕ ಹುಡುಗಿಯರಿಗೆ ವಿವಾಹ ನೆರವು ಮತ್ತು ಇತರ ವಿಷಯಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡಲಾಗುತ್ತದೆ. ಕೆಲಸಕ್ಕಾಗಿ ಭೇಟಿ ವೀಸಾದ ಮೇಲೆ ಬಹ್ರೇನ್‍ಗೆ ಬರುವ ಅನೇಕ ಜನರಿಗೆ ಉದ್ಯೋಗ, ಸಿಲುಕಿಕೊಂಡವರಿಗೆ ಹಿಂತಿರುಗಲು ಸಹಾಯ ವೆಚ್ಚವನ್ನು ಭರಿಸುವ ಹೊರತಾಗಿಯೂ, ಇತರ ಆರ್ಥಿಕ ಸಹಾಯವನ್ನು ನೀಡಲು ಸಂಸ್ಥೆಗೆ ಸಾಧ್ಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಅಧ್ಯಕ್ಷ ಅಝೀಝ್ ಮರಿಕೆ, ಪ್ರಧಾನ ಕಾರ್ಯದರ್ಶಿ ಎ.ಕೆ.ಆರಿಫ್, ಕೋಶಾಧಿಕಾರಿ ಯು.ಕೆ.ಸೈಪುಲ್ಲಾ ತಂಙಳ್, ಬಹರೈನ್ ಕೆಎಂಸಿಸಿ ಮಂಜೇಶ್ವರ ಕ್ಷೇತ್ರದ ಕೋಶಾಧಿಕಾರಿ ಮುಸ್ತಫಾ ಸುಂಕದಕಟ್ಟೆ, ಸಂಘಟನಾ ಕಾರ್ಯದರ್ಶಿ ಸಮೀರ್ ಬಿ ಮುಹಮ್ಮದ್ ಆರಿಕ್ಕಾಡಿ, ಉಪಾಧ್ಯಕ್ಷ ಮಹ್ಮದ್ ಮೊಗೇರ್ ಉಪಸ್ಥಿತರಿದ್ದರು.