ಬದಿಯಡ್ಕ: ನಾರಂಪಾಡಿ ಶಿವಗಿರಿ ಫ್ರೆಂಡ್ಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‍ನ ಓಣಂ ಆಚರಣೆ 2023 ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರ ದೇವಸ್ಥಾನದ ಸೇವಾ ಸಮಿತಿ ಉಪಾಧ್ಯಕ್ಷ ಕುಂಞÂರಾಮ ಗೋಸಾಡ ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಲಬ್ಬಿನ ಉಪಾಧ್ಯಕ್ಷ ಸತೀಶ್ ಪಿ ನೆಲ್ಯಡ್ಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮಾದರಿ ಅಂಗನವಾಡಿ ಅಧ್ಯಾಪಿಕೆ ದಿಲ್‍ಶಾದ್ ಯಂ ಎಸ್ ಶುಭಾಶಂಸನೆಗೈದರು. ಸಾಮಾಜಿಕ ಕಾರ್ಯಕರ್ತರಾದ ಸುನಿಲ್ ಪಿ ಅರ್, ಗೋಪಾಲಕೃಷ್ಣ ಯಂ, ಹರೀಶ್ ಪಾಟಾಳಿ ಉಪಸ್ಥಿತರಿದ್ದರು. ಸುಬ್ರಮಣ್ಯ ಪಿ ಸ್ವಾಗತಿಸಿ, ಪ್ರಮೋದ್ ಮುಂಡೋಳುಮೂಲೆ ವಂದಿಸಿದರು. ವಿವಿಧ ಸ್ಪರ್ಧೆಗಳು ನಡೆಯಿತು.