ತಿರುವನಂತಪುರಂ: ಓಣಂ ಆಚರಣೆ ವೇಳೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಜಕೂಟಂ ವೆಟ್ಟೂರು ರಸ್ತೆಯ ನಿವಾಸಿ ವಿನೇಶ್ (40) ಮೃತಪಟ್ಟವರು.
ಓಣಂ ಆಚರಣೆಯ ಅಂಗವಾಗಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮರದ ಕೊಂಬೆ ಮುರಿದು ವಿನೇಶ್ ಅವರ ಮೈಮೇಲೆ ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ. ವಿನೇಶ್ ಕಟ್ಟಡ ಕಾರ್ಮಿಕರಾಗಿದ್ದರು.