ಕಾಸರಗೋಡು: ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯಾಸಕ್ಕಾಗಿ ಉಚಿತ ತರಗತಿಗಳನ್ನು ಆಯೋಜಿಸುವ 'ಮುಂದಕ್ಕೆ' ಯೋಜನೆ ಸೆ. 17ರಂದು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಆರಂಭಗೊಳ್ಳಲಿದೆ. ಯೋಜನೆಯನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ. ಕೈನಿಕರ ಪಾಲ್ಗೊಳ್ಳುವರು. ಕೆಎಎಸ್ ಅಧಿಕಾರಿಗಳಾದ ಆದಿಲ್ ಮುಹಮ್ಮದ್, ಎ.ಅಜಿತಾ, ಆಸಿಫ್ ಅಲಿಯಾರ್ ಮತ್ತು ಅಜಿತ್ ಜಾನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.
ಕಾಸರಗೋಡು ಅಭಿವೃದ್ಧಿ ಜಿಲ್ಲಾ ಪ್ಯಾಕೇಜ್ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಜಂಟಿಯಾಗಿ ಪಿಎಸ್‍ಸಿ ಮತ್ತು ಯುಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ತರಬೇತಿಯನ್ನು ನೀಡಲಿದೆ. ಯೋಜನೆಯ ಮೊದಲ ಹಂತದಲ್ಲಿ ಪಿಎಸ್‍ಸಿ ಕೋಚಿಂಗ್ ತರಗತಿಗಳನ್ನು ಉಚಿತವಾಗಿ ನೀಡಲಾಗುವುದು. ಜಿಲ್ಲೆಯ ಆರು ಬ್ಲಾಕ್‍ಗಳಲ್ಲಿ ಆರು ಅಧ್ಯಯನ ಕೇಂದ್ರಗಳು ಇರಲಿವೆ. ಕಾಸರಗೋಡು ಸರ್ಕಾರಿ ಕಾಲೇಜು, ಜಿಎಚ್‍ಎಸ್‍ಎಸ್ ಹೊಸದುರ್ಗ, ಜಿವಿಎಚ್‍ಎಸ್‍ಎಸ್ ಮುಳ್ಳೇರಿಯಾ, ಜಿಎಚ್‍ಎಸ್‍ಎಸ್ ಪಿಲಿಕೋಡ್, ಜಿಎಚ್‍ಎಸ್‍ಎಸ್ ಉಪ್ಪಳ, ಜಿಎಚ್‍ಎಸ್‍ಎಸ್ ಪರಪ್ಪ ಕೇಂದ್ರಗಳಲ್ಲಿ ಅಧ್ಯಯನ ಕೇಂದ್ರಗಳು ಕಾರ್ಯಾಚರಿಸಲಿದೆ.
ಪ್ರತಿ ಎರಡನೇ ಶನಿವಾರ ಮತ್ತು ಭಾನುವಾರ ತರಗತಿಗಳನ್ನು ಆಯೋಜಿಸಲಾಗುವುದು. ಒಂದು ತಿಂಗಳಲ್ಲಿ ಐದು ತರಗತಿಗಳು ನಡೆಯಲಿದ್ದು, ತರಗತಿಯು ಎರಡು ಬ್ಯಾಚ್‍ಗಳಲ್ಲಿ ಇರಲಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಅರ್ಹತೆಗಾಗಿ ಒಂದು ಬ್ಯಾಚ್ ಮತ್ತು ಪದವಿ ಅರ್ಹತೆ ಹೊಂದಿರುವವರಿಗೆ ಮತ್ತೊಂದು ಬ್ಯಾಚ್ ಕಾರ್ಯಾಚರಿಸಲಿದೆ.