ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಸರಗೋಡು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ದಿನ ವೇತನ ಆಧಾರದಲ್ಲಿ ಡಾಟಾ ಅನಾಲಿಸ್ಟ್ (ಒಂದು), ಸೋಶಿಯಲ್ ವರ್ಕರ್ (ಒಂದು) ಹುದ್ದೆಗಳಿಗೆ ಸೆಪ್ಟೆಂಬರ್ 14 ರಂದು ಸಂದರ್ಶನ ನಡೆಸಲಾಗುವುದು.
ಡಾಟಾ ಅನಾಲಿಸ್ಟ್ ಹುದ್ದೆಗೆ ಸ್ಟಾಟಿಸ್ಟಿಕ್ಸ್, ಮ್ಯಥಮಾಟಿಕ್ಸ್, ಎಕನಾಮಿಕ್ಸ್, ಕಂಪ್ಯೂಟರ್, ಬಿಸಿಎ ಮುಂತಾದವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕೆಲಸದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಸೋಶಿಯಲ್ ವರ್ಕರ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎ.ಇನ್ ಸೋಶಿಯಲ್ ವರ್ಕ್/ ಸೋಶಿಯಾಲಜಿ /ಸೋಶಿಯಲ್ ಸೈನ್ಸ್ ಮುಂತಾದವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದಿದ್ದು, ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕೆಲಸದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಛಾಯಾಚಿತ್ರ ಒಳಗೊಂಡ ಬಯೋಡಾಟ, ವಿದ್ಯಾರ್ಹತೆ, ವಯಸ್ಸು, ಕೆಲಸದ ಅನುಭವ ಮುಂತಾದವುಗಳನ್ನು ಸಾಬೀತುಪಡಿಸುವ ಮೂಲ ಪ್ರಮಾಣಪತ್ರಗಳು, ಸ್ವಯಂ ದೃಢೀಕರಿಸಿದ ಪ್ರತಿಗಳೊಂದಿಗೆ ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಘಟಕಕ್ಕೆ ಸಂದರ್ಶನಕ್ಕೆ ತಲುಪಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256990)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.