ಮಂಜೇಶ್ವರ: ಬಾಕುಡರ ಸಾಂಸ್ಕೃತಿಕ ಅಧ್ಯಯನ ಎಂಬ ಮೊಟ್ಟಮೊದಲ ಸಂಶೋಧನಾ ಕೃತಿಯನ್ನು ಬರೆದು ಡಾಕ್ಟರೇಟ್ ಪದವಿ ಪಡೆದ ಗೋವಿಂದ ಪೈ ಕಾಲೇಜಿನ ನಿವ್ರತ್ತ ಉಪನ್ಯಾಸಕಿಯಾದ ಅಮಿತಾ ಮಂಜೇಶ್ವರ ರವರನ್ನು ಚಿಣ್ಣರ ಚಿಲುಮೆ ಸಂಘಟಕ ಸಮಿತಿ ವತಿಯಿಂದ ಗೌರವಿಸಲಾಯಿತು.
ಗೌರವಿಸಿ ಮಾತನಾಡಿದ ಚಿಣ್ಣರ ಚಿಲುಮೆ ಸಮಿತಿಯ ಅಧ್ಯಕ್ಷರಾದ ಪಂಡಿತ್ ವಿಜಯ್ ಮಂಗಲ್ಪಾಡಿಯವರು ಮಾತನಾಡಿ,"ಸಮುದಾಯದ ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ಅನಾವರಣ ಗೊಳಿಸಿದ ಸಮುದಾಯದ ಮೊತ್ತ ಮೊದಲ ಸಂಶೋಧನಾ ಗ್ರಂಥ ಬಾಕುಡರ ಸಾಂಸ್ಕೃತಿಕ ಅಧ್ಯಯನ ವಾಗಿದ್ದು ಇದು ಸಮುದಾಯದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವಂತಾಗಲಿ ಎಂದು ಹೇಳಿದರು.
ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಅಮಿತಾ ಮಂಜೇಶ್ವರ ರವರು ,"ಸುಧೀರ್ಘವಾದ ಪ್ರಯತ್ನದ ಫಲವಾಗಿ ಈ ಯಶಸ್ಸು ಲಭಿಸಿದೆ. ಸಮುದಾಯದ ಕಟ್ಟುಪಾಡುಗಳೊಂದಿಗೆ ಆಚಾರ ವಿಚಾರಗಳನ್ನು ಜೀವಂತವಾಗಿರಿಸಲು ಮತ್ತು ವೈಜ್ಞಾನಿಕ ಚಿಂತನೆಯನ್ನು ಮೂಡಿಸಲು ಬಾಕುಡ ಸಮುದಾಯಕ್ಕೆ ಸಂಶೋಧನ ಗ್ರಂಥ ಸಹಕಾರಿಯಾಗಲಿ. ಅಭಿನಂದಿಸಿದ ಚಿಣ್ಣರ ಚಿಲುಮೆ ಸಂಘಟಕ ಸಮಿತಿಗೆ ಅಭಾರಿಯಾಗಿದ್ದೇನೆ" ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಕುಡ ಸಮಾಜದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯ ತುಳಶಿದಾಸ್ ಮಂಜೇಶ್ವರ,ಚಿಣ್ಣರ ಚಿಲುಮೆ ಸಮಿತಿ ನಿರ್ದೇಶಕ ಅಶೋಕ್ ಕೊಡ್ಲಮೊಗರು,ಸಯ್ಯೊ0ಜಕಿ ಬೇಬಿ ತಚ್ಚನಿ, ಸಂಚಾಲಕರಾದ ತಾರನಾಥ್ ತಚ್ಚನಿ, ಸಂಘಟನಾ ಕಾರ್ಯದರ್ಶಿ ರಘುರಾಮ್ ಛತ್ರಂಪಲ್ಲ,ಪ್ರಿಜ್ಜು ಬಳ್ಳಾರ್,ಪವನ್ ಹೊಸಂಗಡಿ,ಶ್ರೀ ರಾಮ್ ಅನುತೇಜ್ ಮೊದಲಾದವರು ಉಪಸ್ಥಿತರಿದ್ದರು. ಚಿಣ್ಣರ ಚಿಲುಮೆ ಸಮಿತಿಯ ಕಾರ್ಯದರ್ಶಿ ರಾಜೇಶ್ ಕೊಡ್ಲಮೊಗರು ಸ್ವಾಗತಿಸಿ,ರಾಜೇಶ್ ಮಂಜೇಶ್ವರ ವಂದಿಸಿದರು