ಗುಜರಾತ್: ಗುಜರಾತ್‌ನ ವಲ್ಸಾದ್‌ನ ಛಿಪ್‌ವಾಡ್‌ನಲ್ಲಿ ಹಮ್‌ಸಫರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಜನರೇಟರ್ ಇಟ್ಟಿದ್ದ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಬೆಂಕಿಯು ಮೊದಲು ಜನರೇಟರ್‌ನಲ್ಲಿಯೇ ಪ್ರಾರಂಭವಾಯಿತು. ಆದರೆ ಅದರ ಜ್ವಾಲೆಯು ತುಂಬಾ ದೊಡ್ಡದಾಗಿದ್ದು ಅದು ಇಡೀ ಬೋಗಿಯನ್ನು ಆವರಿಸಿತು. ಸಕಾಲದಲ್ಲಿ ಎಲ್ಲ ಪ್ರಯಾಣಿಕರನ್ನು ರೈಲಿನಿಂದ ಹೊರಕಳುಹಿಸಿದ್ದರಿಂದ ಸಮಾಧಾನ ತಂದಿದೆ.
ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ರೈಲಿನ ಬೋಗಿಯಿಂದ ಜ್ವಾಲೆ ಹೊರ ಬರುತ್ತಿರುವುದು ಕಂಡು ಬಂದಿದೆ. ಹಮ್ಸಫರ್ ರೈಲಿನ ಜನರೇಟರ್ ಬೋಗಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈಗ ಆ ಬೆಂಕಿ ಹೇಗೆ ಶುರುವಾಯಿತು. ನಿರ್ಲಕ್ಷ್ಯವೇ ಅಥವಾ ಬೇರೆ ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವೇ ಹೊತ್ತಿನಲ್ಲಿ ಬೆಂಕಿ ದೊಡ್ಡ ಸ್ವರೂಪ ಪಡೆದು ಮತ್ತೊಂದು ಬೋಗಿ ಸುಟ್ಟು ಕರಕಲಾಗಿದೆ.