ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗಣೇಶ ಚೌತಿ ಪ್ರಯುಕ್ತ ವಿಶೇಷ ಗಣಪತಿ ಹೋಮ ನಡೆಯಿತು. ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರು ಪೌರೋಹಿತ್ಯವನ್ನು ವಹಿಸಿ ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ಶಾಲಾ ಮಕ್ಕಳು, ಮುಖ್ಯೋಪಾಧ್ಯಾಯ ಶ್ಯಾಂ ಭಟ್ ದರ್ಬೆಮಾರ್ಗ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಶಾಲಾ ಆಡಳಿತ ಮಂಡಳಿ ಪ್ರಮುಖರು ಪಾಲ್ಗೊಂಡಿದ್ದರು.