ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಮಹಾಸಭೆ ಬ್ಯಾಂಕ್‍ನ ಪ್ರಧಾನ ಕಛೇರಿಯ ಸಮನ್ವಯ ಸಭಾ ಭವನದಲ್ಲಿ ಭಾನುವಾರ ಜರಗಿತು. ಬ್ಯಾಂಕ್‍ನ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸಿ ಬ್ಯಾಂಕ್‍ನ ಕಾರ್ಯನಿರ್ವಹಣೆಯ ಬಗ್ಗೆ ವಿವಿರಣೆಯನ್ನು ನೀಡಿದರು. 2022-23ನೇ ವರ್ಷದ ಜಮಾ ಖರ್ಚಿನ ಅಂಗೀಕಾರ, ಬಾಕಿ ಪತ್ರದ ಅಂಗೀಕಾರ, ಸಪ್ಲಿಮೆಂಟರಿ ಬಜೆಟ್, ಲೆಕ್ಕ ಪರಿಶೋಧನಾ ವರದಿ ಅಂಗೀಕಾರ ಮತ್ತು ನ್ಯೂನತೆಯ ಪರಿಹಾರದ ಕುರಿತು ಚರ್ಚಿಸಿ ಅಂಗೀಕಾರ ಪಡೆದುಕೊಳ್ಳಲಾಯಿತು. ಕಾರ್ಯದರ್ಶಿ ಶ್ರೀಕೃಷ್ಣ ಭಟ್ ವರದಿ ಮಂಡಿಸಿದರು. ನಿರ್ದೇಶಕರುಗಳಾದ ರಾಮ ಭಟ್ ಎಚ್., ವೆಂಕಪ್ಪ ಭಟ್, ಆನಂದ ಭಂಡಾರಿ, ಉದಯ ಕುಮಾರ್, ಜನಾರ್ಧನ ಪೂಜಾರಿ, ಸುನಿಲ್ ಕುಮಾರ್ ಟಿ.ಸಿ., ಗೋಪಾಲಕೃಷ್ಣ ಮುಖಾರಿ ಎಂ ಪೆರ್ಣೆ, ಬಿಜು, ಲಕ್ಷ್ಮೀ ವಿ. ಭಟ್, ಕಮಲಾಕ್ಷಿ, ಶಶಿಕಲ ಪಿ.ಆರ್. ಉಪಸ್ಥಿತರಿದ್ದರು. ಇದೇ ಸಂದಭರ್Àದಲ್ಲಿ ಬೇಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು. ರಾಮ ಭಟ್ ಹಳೆಮನೆ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಸ್ವಾಗತಿಸಿ, ನಿರ್ದೇಶಕಿ ಲಕ್ಷ್ಮೀ ವಿ.ಭಟ್ ವಂದಿಸಿದರು.