ಉಪ್ಪಳ: ಸನಾತನ ಧರ್ಮವು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಹೊಂದಿಕೆಯಾಗುವುದಿಲ್ಲ, ಅದನ್ನು ತೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ರ ಈ ಹೇಳಿಕೆಯನ್ನು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಬಲವಾಗಿ ಖಂಡಿಸಿದ್ದಾರೆ.
ಜಗತ್ತಿನಾದ್ಯಂತ ಇಂದು ಸನಾತನ ಧರ್ಮದ ಸಾರವನ್ನು ಎತ್ತಿ ಹಿಡಿಯುತ್ತಿರುವ ಈ ಸಂದರ್ಭದಲ್ಲಿ , ಈ ಪವಿತ್ರ ಸನಾತನ ಭೂಮಿಯಲ್ಲಿ ಜನಿಸಿದ, ಒಬ್ಬ ಸಚಿವನಾಗಿ ಈ ರೀತಿ ಸನಾತನ ಧರ್ಮದ ಅವಹೇಳನದ ಹೇಳಿಕೆ ನೀಡಿರುವುದು ಖಂಡನೀಯ ಮಾತ್ರವಲ್ಲ, ಸಚಿವರು ಹೇಳಿಕೆಯನ್ನು ತಕ್ಷಣ ಹಿಂಪಡೆದು ಸನಾತನ ಧರ್ಮ ಬಾಂಧವರ ಕ್ಷಮೆ ಕೋರಬೇಕೆಂದು ಶ್ರೀಗಳು ಆಗ್ರಹಿಸಿದ್ದಾರೆ.