ಕಾಸರಗೋಡು: ಭಗವಂತನನ್ನು ತೃಪ್ತಿಪಡಿಸಲು ಭಜನೆ ಏಕೈಕ ಮಾರ್ಗ. ಸಂಕೀರ್ತನೆಯಲ್ಲಿ ಭಕ್ತಿಯೂ ಅಡಕವಾಗಿರಬೇಕು. ಭಕ್ತಿ ಪೂರ್ವಕವಾಗಿ ಭಗವಂತನನ್ನು ಭಜಿಸಿದರೆ ಎಲ್ಲಾ ದುರಿತಗಳು ಪರಿಹಾರಗೊಳ್ಳತ್ತದೆ. ಭಜನೆಯ ಮೂಲಕ ಧಾರ್ಮಿಕ ಜಾಗೃತಿ ಮೂಡುತ್ತದೆ ಎಂದು ಸಮಾಜ ಸೇವಕಿ, ಧಾರ್ಮಿಕ ಮುಂದಾಳು ಮೀರಾ ಕಾಮತ್ ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಮಮಿಯ ಅಂಗವಾಗಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಸಮಿತಿ ನೇತೃತ್ವದಲ್ಲಿ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ ಕಾಸರಗೋಡು ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪ`ರ್Éಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿ ಅಧ್ಯಕ್ಷ ದಿವಾಕರ ಅಶೋಕನಗರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ನಾಯ್ಕ್, ರಾಮದಾಸ್, ನಿರ್ಮಲ, ಕುಶಲ ಕುಮಾರ್, ಮೇಘರಾಜ್, ಶ್ರೀಕಾಂತ್ ಕಾಸರಗೋಡು, ಯೋಗೀಶ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು. ನೃತ್ಯ ಕಲಾವಿದೆ ಸುಚಿತ್ರ ಭಾರತಿ, ಭಜನಾ ಸಾಮ್ರಾಟ್ ಮೋಹನ ಆಚಾರ್ಯ ಪುಳ್ಕೂರು, ಕವಿ, ಲೇಖಕ ವಿಷ್ಣು ಶಾನುಭೋಗ್ ತೀರ್ಪುಗಾರರಾಗಿ ಭಾಗವಹಿಸಿದರು.
ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಸಂಘಟಕ ಜಗದೀಶ್ ಕೂಡ್ಲು, ಅಶ್ವಿನಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಮಿತಿ ಕಾರ್ಯದರ್ಶಿ ಕಾವ್ಯ ಕುಶಲ ವಂದಿಸಿದರು. ವಿಜೇತರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ದಿನವಾದ ಸೆ.6 ರಂದು ಬಹುಮಾನ ವಿತರಿಸಲಾಗುವುದು.