ಕಾಸರಗೋಡು: ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಿಸಲಾಯಿತು. ಶಾಲಾ ವಠಾರದಿಂದ ವರ್ಣ ರಂಜಿತವಾದ ಶ್ರೀ ಕೃಷ್ಣ-ರಾಧೆಯರ ವೇಷದಾರಿಗಳೊಂದಿಗೆ ಮೆರವಣಿಗೆ ನಡೆಯಿತು. ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥರು ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಮೆರವಣಿಗೆಯೊಂದಿಗೆ ಹೆಜ್ಜೆಹಾಕಿದರು.
ಈ ಸಂದರ್ಭ ನಡೆದ ಸಭೆಯಲ್ಲಿ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಜಂಜಾಟದಿಂದ ಕೂಡಿದ ಮನುಷ್ಯನ ಬದುಕಿಗೆ ಭಗವದ್ಗೀತೆ ಒಂದು ಕೈಪಿಡಿಯಾಗಿದೆ. ಯಾವುದೇ ಸಮಸ್ಯೆಗಳು ಎದುರಾದಲ್ಲಿ ಎದೆಗುಂದದೆ ಧೈರ್ಯದಿಂದ ಮುನ್ನಡೆಯಲು ಶ್ರೀ ಕೃಷ್ಣನ ಸಂದೇಶವು ನಮಗೆ ಆದರ್ಶವಾಗಿದೆ. ಸದಾ ಹಸನ್ಮುಖಿಗಳಾಗಿರಬೇಕು. ಪುರಾಣ ಕಥೆ ಬಗೆಗಿನ ಅರಿವನ್ನು ಬಾಲ್ಯದಿಂದಲೇ ಹೆತ್ತವರು ಮಕ್ಕಳಿಗೆ ಬೋಧಿಸಬೇಕು. ಈ ಮೂಲಕ ಸನಾತನ ಸಂಸ್ಕøತಿ ಉಳಿದು ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ ಹಾಗೂ ಮುಖ್ಯೋಪಾಧ್ಯಾಯನಿ ಮಾನಸ ಉಪಸ್ಥಿತರಿದ್ದರು. ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶಾಲಾ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಸ್ವಾಗತಿಸಿದರು. ಶಾಲಾವಿದ್ಯಾರ್ಥಿನಿ ಸಮನ್ವಿತ ಕಾರ್ಯಕ್ರಮವನ್ನು ನಿರೂಪಿಸಿದರು. ವೈಭವಿ ವಂದಿಸಿದರು.