ಕಾಸರಗೋಡು : ಜಿಲ್ಲೆಯ ವಿವಿಧ ಟ್ಯೂಷನ್ ಸೆಂಟರ್ ಪಿಎಸ್‍ಸಿ, ಎಂಟ್ರೆನ್ಸ್ ಕೋಚಿಂಗ್ ಸೆಂಟರ್‍ಗಳಲ್ಲಿ ಸರ್ಕಾರಿ, ಅನುದಾನಿತ ವಲಯದ ಶಿಕ್ಷಕರು ಹಾಗೂ ಇತರೆ ಇಲಾಖೆಗಳ ನೌಕರರು ತರಗತಿ ನಡೆಸುತ್ತಿದ್ದಾರೆ ಎಂಬ ವಿವಿಧೆಡೆಯಿಂದ ಲಭಿಸಿ ದೂರುಗಳ ಹಿನ್ನೆಲೆಯಲ್ಲಿ ಕಾಸರಗೋಡು ವಿಜಿಲೆನ್ಸ್ ಡಿವೈಎಸ್‍ಪಿ ವಿ. ಕೆ.ವಿಶ್ವಂಭರನ್ ನಾಯರ್ ನೇತೃತ್ವದಲ್ಲಿ ಮಿಂಚಿನ ತಪಾಸಣೆ ನಡೆಸಲಾಯಿತು.
ನೀಲೇಶ್ವರ ಚೆರುವತ್ತೂರು ಮುಂತಾದ ಸ್ಥಳಗಳಲ್ಲಿ ಇಂತಹ ಟ್ಯೂಷನ್ ಸೆಂಟರ್, ಕೋಚಿಂಗ್ ಕೇಂದ್ರಗಳಲ್ಲಿತಪಾಸಣೆ ನಡೆಸಲಾಯಿತು. ವಿವಿಧ ಕೇಂದ್ರಗಳಲ್ಲಿ ಶಾಲಾ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಅವರ ಅನುಕೂಲ ಸಮಯದಲ್ಲಿ ತರಗತಿ ನಡೆಸುತ್ತಿರುವುದು ಖಚಿತಗೊಂಡಿದೆ. ಖಾಸಗಿ ಸಂಸ್ಥೆಗಳಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ವಿಜಿಲೆನ್ಸ್ ನಿರ್ದೇಶಕರಿಗೆ ತಪಾಸಣೆಯ ವಿವರವಾದ ವರದಿಯನ್ನು ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಸಂಸ್ಥೆಗಳ ಮೇಲೆ ನಿಗಾಯಿರಿಸಿ ಇಂತಹ ಸಂಸ್ಥೆಗಳ ಮೇಲೆ ತಪಾಸಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಿಲೆನ್ಸ್ ತಂಡದ ಉಪ ಇನ್ಸ್ ಪೆಕ್ಟರ್‍ಗಳಾದ ವಿ.ಎಂ.ಮಧುಸೂದನನ್, ಪಿ.ವಿ.ಸತೀಶನ್, ಸಹಾಯಕ ಸಬ್ ಇನ್ಸ್ ಪೆಕ್ಟರ್‍ಗಳಾದ ವಿ.ಟಿ. ಸುಭಾಷ್ ಚಂದ್ರನ್, ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಪ್ರಿಯಾ ನಾಯರ್, ಪಿ.ಕೆ.ರಂಜಿತ್ ಕುಮಾರ್, ಕೆ.ಬಿ. ಬಿಜು. ಕೃಷ್ಣನ್, ಪೆರಿಯ ಕೃಷಿ ಅಧಿಕಾರಿ ಸಿ.ಪ್ರಮೋದ್ ಕುಮಾರ್ ಕಾರ್ಯಾಚರಣೆಯಲ್ಲಿದ್ದರು.