HEALTH TIPS

ಕಾಸರಗೋಡಿಗೂ ಬರಲಿರುವ ಮತ್ತೊಂದು ವಂದೇಭಾರತ್ ರೈಲು: ಭಾನುವಾರ ಉದ್ಘಾಟನೆ


                ಕಾಸರಗೋಡು: ಕೇರಳಕ್ಕೆ ಇನ್ನೊಂದು ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಮಂಜೂರಾಗಿದ್ದು, ಕಾಸರಗೋಡು-ತಿರುವನಂತಪುರ ಮಧ್ಯೆ ಭಾನುವಾರದಿಂದ ಸಂಚಾರ ಆರಂಭಿಸಲಿದೆ. ಬೆಳಗ್ಗೆ 7ಕ್ಕೆ ಕಾಸರಗೋಡಿನಿಂದ ಸಂಚಾರ ಆರಂಭಿಸಲಿರುವ ರೈಲು ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ಸಂಜೆ 4.05ಕ್ಕೆ ತಿರುವನಂತಪುರದಿಂದ ಹೊರಟು ರಾತ್ರಿ 11.55ಕ್ಕೆ ಕಾಸರಗೋಡು ತಲುಪಲಿದೆ.

                ಈ ಹಿಂದೆ ಕೇರಳಕ್ಕೆ ಮಂಜೂರಾಗಿರುವ ವಂದೇಭಾರತ್ ಎಕ್ಸ್‍ಪ್ರೆಸ್ ರೈಲು ಕೋಟ್ಟಾಯಂ ಹಾದಿಯಾಗಿ ಸಂಚರಿಸುತ್ತಿದ್ದರೆ, ಹೊಸ ರೈಲು ಆಲಪ್ಪುಳ ಹಾದಿಯಾಗಿ ಸಂಚರಿಸಲಿದೆ. ಕಣ್ಣೂರು, ಕೋಯಿಕ್ಕೋಡು, ಕೋಯಿಕ್ಕೋಡ್, ತೃಶ್ಯೂರ್, ಎರ್ನಾಕುಳಂಸೌತ್, ಆಲಪ್ಪುಳ, ಕೊಲ್ಲಂ ನಿಲ್ದಾಣಗಳಲ್ಲಿ ರೈಲಿಗೆ ನಿಲುಗಡೆ ಕಲ್ಪಿಸಲಗಿದೆ. ಕಾಸರಗೊಡು-ತಿರುವನಂತಪುರ ನಡುವಿನ ಸಂಚಾರಕ್ಕೆ ಎಂಟು ತಾಸು ಹಾಗೂ ತಿರುವನಂತಪುರದಿಂದ ಕಾಸರಗೋಡಿಗೆ 7.55ಗಂಟೆ ನಿಗದಿಪಡಿಸಲಾಗಿದೆ. ವಾರದಲ್ಲಿ ಒಟ್ಟು ಆರು ದಿವಸಗಳ ಕಾಲ ರೈಲು ಸಂಚಾರ ನಡೆಸಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries