ಕೊಚ್ಚಿ: ಪತ್ರಿಕಾಗೋಷ್ಠಿಯಲ್ಲಿ ಯಾರು ಮೊದಲು ಮಾತನಾಡಬೇಕೆಂಬ ಸಣ್ಣ ವಿಚಾರದಲ್ಲಿ ಕೇರಳದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರು ವಾಗ್ವಾದ ನಡೆಸಿರುವ ವೀಡಿಯೊವೊಂದು, ಇದೀಗ ವೈರಲ್ ಆಗಿದೆ. ಇದು ಕೇರಳದ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿಗಳ ನಡುವಿನ ಆಂತರಿಕ ಕಲಹವನ್ನ ಬಹಿರಂಗಪಡಿಸಿದೆ.
ಕೊಚ್ಚಿ: ಪತ್ರಿಕಾಗೋಷ್ಠಿಯಲ್ಲಿ ಯಾರು ಮೊದಲು ಮಾತನಾಡಬೇಕೆಂಬ ಸಣ್ಣ ವಿಚಾರದಲ್ಲಿ ಕೇರಳದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರು ವಾಗ್ವಾದ ನಡೆಸಿರುವ ವೀಡಿಯೊವೊಂದು, ಇದೀಗ ವೈರಲ್ ಆಗಿದೆ. ಇದು ಕೇರಳದ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿಗಳ ನಡುವಿನ ಆಂತರಿಕ ಕಲಹವನ್ನ ಬಹಿರಂಗಪಡಿಸಿದೆ.
ಸೆಪ್ಟೆಂಬರ್ 8 ರಂದು ಕೊಟ್ಟಾಯಂ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಕಛೇರಿಯಲ್ಲಿ ಪಕ್ಷದ ಅಭ್ಯರ್ಥಿ ಚಾಂಡಿ ಉಮ್ಮನ್ ಅವರು ಪುತ್ತುಪಲ್ಲಿ ಉಪಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆದ್ದ ಬೆನ್ನಲ್ಲೇ, ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಹಾಗೂ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಕೆ. ಸುಧಾಕರನ್ ನಡುವಿನ ವಾಗ್ವಾದ ವೀಡಿಯೊ ಸೆರೆಯಾಗಿದೆ.
ಪ್ರೆಸ್ ಮೀಟ್ ಗೆ ಕುಳಿತಾಗ ಸತೀಶನ್ ಮೈಕ್ ಗಳ ಸೆಟ್ ಅನ್ನು ತನ್ನ ಕಡೆಗೆ ತಿರುಗಿಸಿದರು. ಆಗ ಸುಧಾಕರನ್ ಮಧ್ಯಪ್ರವೇಶಿಸಿ ನಾನು ಮೊದಲು ಮಾತನಾಡುತ್ತೇನೆ ಎಂದು ಹೇಳುವುದು ವೀಡಿಯೊದಲ್ಲಿ ಕಂಡುಬಂದಿದೆ. ಯಾರು ಮೊದಲಿಗೆ ಪತ್ರಿಕಾಗೋಷ್ಠಿ ಆರಂಭಿಸುವುದು ಎಂಬ ಕುರಿತಾಗಿ ಇಬ್ಬರು ನಾಯಕರು ವಾಗ್ವಾದ ನಡೆಸುತ್ತಾರೆ.
ನಾನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿದ್ದರಿಂದ ನಾನೇ ಸುದ್ದಿಗೋಷ್ಟಿ ಮಾಡಿದರೆ ನ್ಯಾಯಯುತವಾಗುತ್ತದೆ ಎಂದು ಸುಧಾಕರ್ ಹೇಳುತ್ತಾರೆ. ಸತೀಶನ್ ಅಂತಿಮವಾಗಿ ಮೈಕ್ರೊಫೋನ್ಗಳನ್ನು ಸುಧಾಕರನ್ ಕಡೆಗೆ ವರ್ಗಾಯಿಸುತ್ತಾರೆ, ನಂತರ ಅವರು ಮಾಧ್ಯಮದೊಂದಿಗೆ ಮಾತನಾಡಲು ಆರಂಭಿಸುತ್ತಾರೆ. ತಮ್ಮ ಮುಂದಿದ್ದ ಮೈಕ್ಗಳು ಅದಾಗಲೇ ಸ್ವಿಚ್ ಆನ್ ಆಗಿರುವುದು ಉಭಯ ನಾಯಕರಿಗೆ ತಿಳಿದಿರಲಿಲ್ಲ.
ಸುದ್ದಿಗೋಷ್ಟಿಯ ಉಳಿದ ಸಮಯದಲ್ಲಿ ಸತೀಶನ್ ಯಾವುದೇ ಹೇಳೀಕೆ ನೀಡಲಿಲ್ಲ, "ಅಧ್ಯಕ್ಷರು ಈಗಾಗಲೇ ಅಗತ್ಯವಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ" ಎಂದು ಹೇಳುವ ಮೂಲಕ ಹೆಚ್ಚಿನ ಪ್ರಶ್ನೆಗಳನ್ನು ತಳ್ಳಿಹಾಕಿದ್ದರು.
ಈ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಾಗಿ ವೈರಲ್ ಆಗಿತ್ತು ಟಿವಿ ಚಾನೆಲ್ ಗಳು ಇದನ್ನು ಕೈಗೆತ್ತಿಕೊಂಡವು., ಅನೇಕರು ವಿರೋಧ ಪಕ್ಷದ ನಾಯಕರು ಅಹಂಕಾರದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಟೀಕಿಸಿದರು
ಸತೀಶನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮತ್ತು ಸುಧಾಕರನ್ ನಡುವೆ ನಿಜವಾಗಿಯೂ ವಾಗ್ವಾದ ನಡೆದಿರುವುದನ್ನು ಒಪ್ಪಿಕೊಂಡರು, ಆದರೆ ಮಾಧ್ಯಮಗಳು ಅದನ್ನು ಬೇರೆ ರೀತಿ ಬಿಂಬಿಸುತ್ತಿವೆ ಎಂದರು. ಈ ಘಟನೆ ಬಗ್ಗೆ ಸುಧಾಕರನ್ ಇನ್ನೂ ಪ್ರತಿಕ್ರಿಯಿಸಿಲ್ಲ.