ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರ ಜೀರ್ಣೋದ್ಧಾರ ನಿಧಿ ಕೂಪನಿನ ಬಂಪರ್ ಬಹುಮಾನವಾದ ವಿಜೇತರಾದ ಜಯರಾಮ ಮುಳಿಪರಂಬು ಇವರಿಗೆ ಶ್ರೀಕ್ಷೇತ್ರದಲ್ಲಿ ಜುಪಿಟರ್ ಸ್ಕೂಟರ್‍ನ್ನು ಹಸ್ತಾಂತರಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯ ಭಟ್ ಬೇಂಗ್ರೋಡಿ ಶ್ರೀದೇವರಲ್ಲಿ ಪ್ರಾರ್ಥಿಸಿ ಕೀಲಿಕೈ ಹಸ್ತಾಂತರಿಸಿದರು. ಈ ಸಂದಭರ್Àದಲ್ಲಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಕೋಶಾಧಿಕಾರಿ ನರಸಿಂಹ ಭಟ್ ಕಾರ್ಮಾರು, ಪುನೀತ್ ಕಾರ್ಮಾರು, ನವೀನ್ ಚಂದ್ರ, ವಿನಯ ಕಾರ್ಮಾರು ಉಪಸ್ಥಿತರಿದ್ದರು.