ಕಾಸರಗೋಡು: ಸಮಾಜದ ಉನ್ನತಿಯಲ್ಲಿ ಶ್ರೀ ಎಡನೀರು ಮಠದ ಕೊಡುಗೆ ಅಪಾರವಾದುದು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದ್ದಾರೆ. ಅವರು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮೂರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಮಂಗಲೋತ್ಸವ, ಸೀಮೋಲ್ಲಂಘನ Pಕಾರ್ಯಕ್ರಮದ ಅಂಗವಾಗಿ ಶ್ರೀಮಠದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶಿಕ್ಷಣ, ಕಲೆ, ಸಂಸ್ಕøತಿಯ ಪೋಷಣೆಯ ಕೇಂದ್ರವಾಗಿ ಬೆಳೆದುಬಂದಿರುವ ಎಡನೀರು ಮಠ ನಾಡಿನ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಬೆಳೆದು ನಿಂತಿದೆ. ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ದೂರದರ್ಶಿತ್ವ, ಗಂಡುಮೆಟ್ಟಿನ ಕಲೆ ಯಕ್ಷಗಾನದ ಪೋಷಣೆ ಬಗೆಗಿನ ತಮ್ಮ ಕಾಳಜಿ, ಕಲೆ-ಸಾಹಿತ್ಯದ ಮೇಲಿನ ತಮ್ಮ ಪ್ರೇಮವನ್ನು ಪ್ರಸಕ್ತ ಸಚ್ಚಿದಾನಂದ ಸ್ವಾಮೀಜಿ ಮುಂದುವರಿಸುತ್ತಿರುವುದು ಸಂತೋಷದಾಯಕ ಎಂದು ತಿಳಿಸಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಡನೀರು ಶ್ರೀ ಸಚ್ಚಿದನಂದ ಭಾರತೀ ಸವಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭ ಹಿರಿಯ ವಕೀಲ ಐ.ವಿ ಭಟ್ ಅವರಭಿನಂದನಾ ಗ್ರಂಥ"ಸ್ಥಿತ ಪ್ರಜ್ಞ' ಕೃತಿಯನ್ನು ಶ್ರೀ ಸಚ್ಚಿದನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸ್ವಾಮೀಜೀಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕ ವೃಂದದವರಿಗೆ ಕೆನರಾ ಬ್ಯಾಂಕ್ ವತಿಯಿಂದ ಕೊಡಮಾಡಲಾದ ಸ್ಮರಣಿಕೆಯನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಯ್ಯೂರು ನಾರಾಯಣ ಭಟ್ ವಂದಿಸಿದರು.
ಸೀಮೋಲ್ಲಂಘನಾ ಕರ್ಯಕ್ರಮ:
ಎಡನೀರು ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತಾಚರಣೆ ಮಂಗಲೋತ್ಸವ, ಸೀಮೋಲ್ಲಂಘನ ಕಾರ್ಯಕ್ರಮ ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಪ್ರಾತ:ಕಾಲ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಶ್ರೀಮಠದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನೆ, ಮೇಧಾ ಮಂಜುನಾಥ್ ಬಳಗದವರಿಂದ ಭಕ್ತಿಸಂಗೀತ ಕಾರ್ಯಕ್ರಮ, ಸಂಜೆ ಪುತ್ತೂರು ಜಗದೀಶ ಆಚಾರ್ಯ ಬಳಗದವರಿಂದ ಸಂಗೀತ ಗಾನ ಸಂಭ್ರಮ, ನಾಟ್ಯ ನಿಲಯಂ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಶಿಷ್ಯವೃಂದದಿಂದ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಸಂಗಮ ಕಾರ್ಯಕ್ರಮ'ನೃತ್ಯ ಸಮರ್ಪಣಂ'ಕಾರ್ಯಕ್ರಮ ನಡೆಯಿತು.