ಕಾಸರಗೋಡು : ಜಿಲ್ಲಾ ಎಂಪ್ಲಾಯ್‍ಮೆಂಟ್ ಎಕ್ಸ್‍ಚೇಂಜ್‍ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಪೆÇ್ಲೀಯೆಬಿಲಿಟಿ ಸೆಂಟರ್ ಕಾಸರಗೋಡು ಪ್ರದೇಶದಲ್ಲಿ ಖಾಸಗಿ ಸಂಸ್ಥೆಗೆ ಎ.ಆರ್.ಡಿ.ಎಮ್ (ಏಜೆನ್ಸಿ ರಿಕ್ರೂಟ್‍ಮೆಂಟ್ ಆಂಡ್ ಡೆವಲಪ್‍ಮೆಂಟ್ ಮ್ಯಾನೇಜರ್), (2 ಹುದ್ದೆ) ಅರ್ಹತೆ ಸ್ನಾತಕೋತ್ತರ ಪದವಿ ಅಥವಾ ಪದವಿ, ಒಂದು ವರ್ಷದ ಕೆಲಸದ ಅನುಭವ ಹೊಂದಿರಬೇಕು. ಬಿ.ಎಫ್.ಎಸ್.ಐ ಬ್ಯಾಂಕಿಂಗ್, ಫೈನಾನ್ಸ್, ಸರ್ವೀಸಸ್ ಅಂಡ್ ಇನ್ಶೂರೆನ್ಸ್ ಸೆಕ್ಟರಿನಲ್ಲಿ ಕೆಲಸದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ವಯಸ್ಸಿನ ಮಿತಿ 25-35 ವರ್ಷ ಆಗಿರಲಿದೆ. ಫೈನಾನ್ಶಿಯಲ್ ಅಡ್ವೈಸರ್ ಯಾ ಏಜೆಂಟ್ (ಪಾರ್ಟ್ ಟೈಮ್ ಜಾಬ್), (50 ಹುದ್ದೆ), ಅರ್ಹತೆ ಹತ್ತನೇ ತರಗತಿ, (18 ವರ್ಷ ಮೇಲ್ಪಟ್ಟವರಿಗೆ ಅರ್ಜಿ ಸಲ್ಲಿಸಬಹುದು) ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10ಕ್ಕೆ ಸಂದರ್ಶನ ನಡೆಯಲಿದೆ. ರಿಜಿಸ್ಟ್ರೇಷನ್ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಎಂಪೆÇ್ಲೀಯಬಿಲಿಟಿ ಕೇಂದ್ರವನ್ನು ಸಂಪರ್ಕಿಸಬಹುದಗಿದೆ. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(9207155700, 04994 255582)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.