ನವದೆಹಲಿ: ಚುನಾವಣಾ ಆಯೋಗವು ಇವಿಎಂಗಳಿಗೆ ಬಳಸುತ್ತಿರುವ ತಂತ್ರಾಂಶದ ಲೆಕ್ಕಪರಿಶೋಧನೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ನವದೆಹಲಿ: ಚುನಾವಣಾ ಆಯೋಗವು ಇವಿಎಂಗಳಿಗೆ ಬಳಸುತ್ತಿರುವ ತಂತ್ರಾಂಶದ ಲೆಕ್ಕಪರಿಶೋಧನೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.
'ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಹೊಣೆ. ಆಯೋಗವು ಸಾಂವಿಧಾನಿಕ ನಿಬಂಧನೆ ಉಲ್ಲಂಘಿಸಿ ಕಾರ್ಯನಿರ್ವಹಿಸಿದೆ ಎಂದು ತೋರಿಸಲು ಅರ್ಜಿದಾರರು ನ್ಯಾಯಾಲಯದ ಮುಂದೆ ಯಾವುದೇ ಕ್ರಮಬದ್ಧವಾದ ದಾಖಲೆಗಳನ್ನು ಸಲ್ಲಿಸಿಲ್ಲ. ಇವಿಎಂಗಳ ಮೇಲೆ ಶಂಕೆ ಮೂಡುವಂತಹ ಯಾವುದೇ ಪೂರಕ ದಾಖಲೆಗಳೂ ನಮ್ಮ ಮುಂದಿಲ್ಲ. ಹಾಗಾಗಿ, ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುತ್ತಿಲ್ಲ' ಎಂದು ಪೀಠ ಹೇಳಿದೆ.
ಅರ್ಜಿದಾರ ಸುನಿಲ್ ಅಹ್ಯ ಅವರು ಪಿಐಎಲ್ ಸಲ್ಲಿಸುವುದಕ್ಕೂ ಮೊದಲು ಚುನಾವಣಾ ಆಯೋಗಕ್ಕೂ ಮನವಿ ಸಲ್ಲಿಸಿದ್ದರು.
'ಇವಿಎಂನ ಮಿದುಳು ಎನಿಸಿರುವ ತಂತ್ರಾಂಶದ ಮೇಲೆಯೇ ಪ್ರಜಾಪ್ರಭುತ್ವದ ಉಳಿವು ನಿಂತಿದೆ' ಎಂದು ಪ್ರತಿಪಾದಿಸಿದ ಅರ್ಜಿದಾರರು, ತಂತ್ರಾಂಶದ ಲೆಕ್ಕಪರಿಶೋಧನೆಗೆ ಒಳಪಡಿಸಲು ಕೋರಿದ್ದರು.