ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟ ಆರ್.ಮಾಧವನ್ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(FTII) ಅಧ್ಯಕ್ಷರಾಗಿ, ಆಡಳಿತ ಮಂಡಳಿ ಚೇರ್ಮನ್ ಆಗಿ ನಾಮನಿರ್ದೇಶನಗೊಂಡಿದ್ದಾರೆ.
ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟ ಆರ್.ಮಾಧವನ್ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(FTII) ಅಧ್ಯಕ್ಷರಾಗಿ, ಆಡಳಿತ ಮಂಡಳಿ ಚೇರ್ಮನ್ ಆಗಿ ನಾಮನಿರ್ದೇಶನಗೊಂಡಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
FTIIನ ನೂತನ ಅಧ್ಯಕ್ಷ ಹಾಗೂ ಚೇರ್ಮನ್ ಆಗಿ ನಾಮನಿರ್ದೇಶನಗೊಂಡ ಮಾಧವನ್ ಅವರಿಗೆ ಅಭಿನಂದನೆಗಳು. ನಿಮ್ಮ ಅನುಭವವು ಈ ಸಂಸ್ಥೆಯನ್ನು ಇನ್ನಷ್ಟು ಉತೃಕಷ್ಟಗೊಳಿಸಿ ಧನಾತ್ಮಕ ಬದಲಾವಣೆಗಳೊಂದಿಗೆ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಾ ಎಂದು ನಮಗೆ ಖಾತ್ರಿಯಿದೆ. ನಿಮಗೆ ಶುಭಾಶಯಗಳು ಎಂದು ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.