ನವದೆಹಲಿ: ದೇಶದ ಶ್ರೀಮಂತ ಸಂಗೀತ ಪರಂಪರೆಯನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವಿವಿಧ ಶೈಲಿಯ ಶಾಸ್ತ್ರೀಯ ಮತ್ತು ಸಮಕಾಲೀನ ಸಂಗೀತವನ್ನು ಪ್ರದರ್ಶಿಸುತ್ತಿರುವ ಕಲಾಕಾರರ ಮೇಳವು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರ ಮುಂದೆ ಪ್ರದರ್ಶನ ನೀಡಲಿದೆ.
ಸೆಪ್ಟೆಂಬರ್ 9ರಂದು ಜಿ20 ನಾಯಕರ ಗೌರವಾರ್ಥ ಅಧ್ಯಕ್ಷ ದ್ರೌಪದಿ ಮುರ್ಮು ಆಯೋಜಿಸುವ ಔಪಚಾರಿಕ ಭೋಜನಕೂಟದಲ್ಲಿ 'ಗಾಂಧರ್ವ ಆಟೋದ್ಯಮ್' ಗುಂಪಿನಿಂದ 'ಭಾರತ ವಾದ್ಯ ದರ್ಶನಂ', ಮ್ಯೂಸಿಕಲ್ ಜರ್ನಿ ಆಫ್ ಇಂಡಿಯಾ ಪ್ರದರ್ಶನವನ್ನು ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗೀತ ನಾಟಕ ಅಕಾಡೆಮಿಯು ಪರಿಕಲ್ಪನೆ ಮಾಡಿರುವ ಸಂತೂರ್, ಸಾರಂಗಿ, ಜಲ ತರಂಗ್ ಮತ್ತು ಶೆಹನಾಯ್ ಮುಂತಾದ ಭಾರತೀಯ ಶಾಸ್ತ್ರೀಯ ಸಂಗೀತ ವಾದ್ಯಗಳನ್ನು ಇದು ಒಳಗೊಂಡಿರುತ್ತದೆ. ಈ ಮೇಳವು 'ಅನನ್ಯ ಮತ್ತು ನೆಲದ ಸಂಗೀತ ಪ್ರಸ್ತುತಿ, ಸಂಗೀತದ ಮೂಲಕ ಭಾರತದ ಸಾಮರಸ್ಯದ ಪ್ರಯಾಣ ಎಂದು ಅಧಿಕೃತ ಕರಪತ್ರದಲ್ಲಿ ಬರೆಯಲಾಗಿದೆ.
ಇದೇ ವೇಳೆ ಕೆಲವು ಪ್ರಮುಖ ಶೈಲಿಗಳಲ್ಲಿ ಹಿಂದೂಸ್ತಾನಿ, ಕರ್ನಾಟಕ ಜಾನಪದ ಮತ್ತು ಸಮಕಾಲೀನ ಸಂಗೀತವನ್ನು ಪ್ರದರ್ಶಿಲಾಗುತ್ತದೆ. ಈ ಪ್ರಾತಿನಿಧಿಕ ಸಂಗೀತದ ಮೂಲಕ ಭಾರತದ ಎಲ್ಲಾ ಭಾಗಗಳ ಸಂಗೀತವನ್ನು ಬಿಂಬಿಸಲಾಗುತ್ತದೆ. ದೇಶಾದ್ಯಂತದ 78 ಸಾಂಪ್ರದಾಯಿಕ ವಾದ್ಯಗಾರರ ಮೇಳವು 'ಗಾಂಧರ್ವ ಆಟೋದ್ಯಮ್' ನಲ್ಲಿ ನಡೆಯುತ್ತದೆ.
ಮೇಳವು ಭಾರತದಾದ್ಯಂತ 34 ಹಿಂದೂಸ್ತಾನಿ ಸಂಗೀತ ವಾದ್ಯಗಳು, 18 ಕರ್ನಾಟಕ ಸಂಗೀತ ವಾದ್ಯಗಳು ಮತ್ತು 26 ಜಾನಪದ ಸಂಗೀತ ವಾದ್ಯಗಳನ್ನು ಒಳಗೊಂಡಿದೆ. 78 ಕಲಾವಿದರಲ್ಲಿ 11 ಮಕ್ಕಳು, 13 ಮಹಿಳೆಯರು, ಆರು ಅಂಗವಿಕಲ (ದಿವ್ಯಾಂಗ್) ಕಲಾವಿದರು, 26 ಯುವಕರು ಮತ್ತು 22 ವೃತ್ತಿಪರರು ಸೇರಿದ್ದಾರೆ ಎಂದು ಕರಪತ್ರದಲ್ಲಿ ತಿಳಿಸಲಾಗಿದೆ.