HEALTH TIPS

G20 Summit: ದೆಹಲಿಗೆ ಬಂದಿಳಿದ ಬ್ರಿಟನ್ ಪ್ರಧಾನಿ ರಿಷಿ, ಜಪಾನ್ ಪ್ರಧಾನಿ ಕಿಶಿಡಾ

                ವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆ.9 ಹಾಗೂ ಸೆ.10ರಂದು ಜಿ-20 ಶೃಂಗಸಭೆ ನಡೆಯಲಿದೆ.

              ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಹಾಗೂ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ದಂಪತಿ ಇಂದು ಭಾರತಕ್ಕೆ ಬಂದಿಳಿದಿದ್ದಾರೆ.

                ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು ಕೂಡ ದೆಹಲಿಗೆ ಬಂದಿಳಿದಿದ್ದಾರೆ.

ಗಣ್ಯರನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅವರು ಬರಮಾಡಿಕೊಂಡಿದ್ದಾರೆ.


                 ಜಗತ್ತಿನ 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟದ ನಾಯಕರು ಪಾಲ್ಗೊಳ್ಳುವ ಅತಿ ದೊಡ್ಡ ವಾರ್ಷಿಕ ಶೃಂಗಸಭೆ 'ಜಿ-20' ಇದಾಗಿದ್ದು, ಗಣ್ಯರ ಸ್ವಾಗತಕ್ಕೆ ದೆಹಲಿ ಸಜ್ಜಾಗಿದೆ.

                    ಲೋಕಸಭಾ ಚುನಾವಣೆಗೆ ಎಂಟು ತಿಂಗಳುಗಳು ಉಳಿದಿರುವ ಸಮಯದಲ್ಲಿ ಸಂಘಟಿಸಿರುವ 'ಶೃಂಗ'ದ ಮಹಾ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಚ್ಚಿನ ಆಸ್ಥೆಯಿಂದ ಕೆಲಸ ಮಾಡುತ್ತಿದೆ. 'ವಿಶ್ವ ಗುರು'ವಾಗಲು ಹಾಗೂ ಸತತ ಮೂರನೇ ಬಾರಿಗೆ 'ಭಾರತ' ಗೆಲ್ಲಲು ಇದೊಂದು ಏಣಿ ಎಂದು ಪರಿಭಾವಿಸಿರುವ ಮೋದಿ ಸರ್ಕಾರವು ಜಾಗತಿಕ ನಾಯಕರ ಸಭೆಯ ಭರ್ಜರಿ ಯಶಸ್ಸಿಗೆ ಆಹೋರಾತ್ರಿ ಶ್ರಮಿಸುತ್ತಿದೆ. https://twitter.com/ANI/status/1700058499382976745

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries