ನವದೆಹಲಿ: ಜರ್ಮನ್ ಭಾಷೆಯಲ್ಲಿ 'ವಿಲ್ಕೊಮೆನ್', ಫ್ರೆಂಚ್ ಭಾಷೆಯಲ್ಲಿ 'ಬೀನ್‌ವೆನ್ಯೂ', ಇಂಗ್ಲಿಷ್‌ನಲ್ಲಿ 'ವೆಲ್‌ಕಂ' ಹಾಗೂ ಹಿಂದಿಯಲ್ಲಿ 'ಸ್ವಾಗತ್'...
ನವದೆಹಲಿ: ಜರ್ಮನ್ ಭಾಷೆಯಲ್ಲಿ 'ವಿಲ್ಕೊಮೆನ್', ಫ್ರೆಂಚ್ ಭಾಷೆಯಲ್ಲಿ 'ಬೀನ್‌ವೆನ್ಯೂ', ಇಂಗ್ಲಿಷ್‌ನಲ್ಲಿ 'ವೆಲ್‌ಕಂ' ಹಾಗೂ ಹಿಂದಿಯಲ್ಲಿ 'ಸ್ವಾಗತ್'...
ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ 20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ರಾಷ್ಟ್ರಗಳ ಅಧಿಕೃತ ಭಾಷೆಗಳಲ್ಲೇ 'ಸ್ವಾಗತ' ಎಂದು ಬರೆಯಲಾದ ಬೃಹತ್ ಫಲಕ ರಾರಾಜಿಸುತ್ತಿದೆ.
ಶೃಂಗಸಭೆ ನಡೆಯಲಿರುವ ಭಾರತ ಮಂಟಪ ಸಂಕೀರ್ಣದ ಹಾಲ್ ಸಂಖ್ಯೆ 14ರ ಬಳಿ ಇದನ್ನು ಅಳವಡಿಸಲಾಗಿದೆ. ಬಹು ಭಾಷೆ ಮತ್ತು ಬಹು ವರ್ಣಗಳಲ್ಲಿ ಬರೆಯಲಾದ ಫಲಕ, ಸ್ವಾಗತಿಸುವ ಸಂದರ್ಭಕ್ಕೆ ಆಕರ್ಷಕ ಹಿನ್ನೋಟವನ್ನು ಒದಗಿಸಿದೆ.
ಜಿ20 ಇಂಡಿಯಾ ತನ್ನ 'ಎಕ್ಸ್' ವೇದಿಕೆಯಲ್ಲಿ ಈ ಕುರಿತ ವಿಡಿಯೊ, ಚಿತ್ರಗಳನ್ನು ಹಂಚಿಕೊಂಡಿದೆ.
ಜಿ20 ಮುಖ್ಯ ಸಮನ್ವಯಕಾರ ಹರ್ಷವರ್ಧನ್ ಶ್ರಿಂಘ್ಲಾ ಅವರು, ಜಿ20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ರಾಷ್ಟ್ರಗಳ ಅತಿಥಿಗಳಿಗೆ ಕಲ್ಪಿಸುವ ಸೌಲಭ್ಯಗಳ ಪರಿಚಯವನ್ನು ಸಣ್ಣ ವಿಡಿಯೊದಲ್ಲಿ ನೀಡಿದ್ದಾರೆ.