ನವದೆಹಲಿ: ಜಿ-20 ಶೃಂಗಸಭೆ ನಡೆಯುವ 'ಭಾರತ ಮಂಟಪಂ' ಬಳಿ ಪ್ರತಿಸ್ಥಾಪಿಸಲಾಗಿರುವ ನಟರಾಜ ವಿಗ್ರಹವು ಭಾರತದ ಪ್ರಾಚೀನ ಕರಕುಶಲ ಕಲೆ ಹಾಗೂ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ನವದೆಹಲಿ: ಜಿ-20 ಶೃಂಗಸಭೆ ನಡೆಯುವ 'ಭಾರತ ಮಂಟಪಂ' ಬಳಿ ಪ್ರತಿಸ್ಥಾಪಿಸಲಾಗಿರುವ ನಟರಾಜ ವಿಗ್ರಹವು ಭಾರತದ ಪ್ರಾಚೀನ ಕರಕುಶಲ ಕಲೆ ಹಾಗೂ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಈ ವಿಗ್ರಹ ಕುರಿತು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು 'ಎಕ್ಸ್'ನಲ್ಲಿ ಮಾಡಿರುವ ಪೋಸ್ಟ್‌ಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಗ್ರಹವನ್ನು ಅಷ್ಟಧಾತುಗಳಿಂದ ತಯಾರಿಸಲಾಗಿದೆ.
'18 ಟನ್ ತೂಕದ, 27 ಅಡಿ ಎತ್ತರದ ಈ ವಿಗ್ರಹವನ್ನು ತಮಿಳುನಾಡಿನ ಸ್ವಾಮಿಮಲೈನ ಶಿಲ್ಪಿ ರಾಧಾಕೃಷ್ಣನ್ ಸ್ಥಪತಿ ನೇತೃತ್ವದ ತಂಡವು ದಾಖಲೆಯ ಏಳು ತಿಂಗಳಲ್ಲಿ ತಯಾರಿಸಿದೆ' ಎಂದು ಕೇಂದ್ರವು ಪೋಸ್ಟ್‌ನಲ್ಲಿ ಹೇಳಿದೆ.
'ಚೋಳ ಸಾಮ್ರಾಜ್ಯದ ಅವಧಿಯಿಂದ, ರಾಧಾಕೃಷ್ಣನ್ ಅವರ 34 ತಲೆಮಾರುಗಳು ಇಂತಹ ದೇವತಾ ವಿಗ್ರಹಗಳನ್ನು ತಯಾರಿಕೆಯಲ್ಲಿ ತೊಡಗಿವೆ. ಈ ನಟರಾಜ ವಿಗ್ರಹವು ಬ್ರಹ್ಮಾಂಡ ಶಕ್ತಿ, ಸೃಜನಶೀಲತೆಯ ಸಂಕೇತ. ಈ ವಿಗ್ರಹವು ಜಿ-20 ಶೃಂಗಸಭೆಯ ಪ್ರಮುಖ ಆಕರ್ಷಣೆಯಾಗಲಿದೆ' ಎಂದು ಹೇಳಿದೆ.
ಜಿ-20 ಶೃಂಗಸಭೆ ನಡೆಯುವ ದೆಹಲಿಯ 'ಭಾರತ ಮಂಟಪಂ' ಬಳಿ ಪ್ರತಿಸ್ಥಾಪಿಸಲಾಗಿರುವ ನಟರಾಜ ವಿಗ್ರಹ